ಫ್ರಾನ್ಸ್ ಫುಟ್ಬಾಲ್ ತಂಡದ ಸ್ಟಾರ್ ಎಂಬಾಪೆಗೆ ದಾಖಲೆಯ 2,716 ಕೋ.ರೂ. ನೀಡಲು ಮುಂದಾದ ಸೌದಿಯ ಅಲ್ ಹಿಲಾಲ್ ಕ್ಲಬ್
ಸಿಡ್ನಿ, ಜು.24: ಫ್ರಾನ್ಸ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಅವರನ್ನು ಸೆಳೆದುಕೊಳ್ಳಲು ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿದೆ.
ಎಂಬಾಪೆ ಅವರು ಈಗ ಫ್ರಾನ್ಸ್ನ ಪಿಎಸ್ಜಿ(ಪ್ಯಾರಿಸ್ ಸೇಂಟ್ ಜರ್ಮೈನ್)ಕ್ಲಬ್ ಪರ ಆಡುತ್ತಿದ್ದಾರೆ. ಮುಂದಿನ ಋತುವಿನ ಬಳಿಕ ಒಪ್ಪಂದದ ಅವಧಿ ಕೊನೆಗೊಳ್ಳಲಿದೆ. ಪಿಎಸ್ಜಿ ಜತೆಗಿನ ಒಪ್ಪಂದ 1 ವರ್ಷಕ್ಕೆ ವಿಸ್ತರಿಸುವ ಅವಕಾಶವಿದೆಯಾದರೂ ಎಂಬಾಪೆ ಆಸಕ್ತಿ ತೋರಿಲ್ಲ. ಮುಂದಿನ ಋತುವಿನ ಬಳಿಕ ಕ್ಲಬ್ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ನಡುವೆಯೇ ಅಲ್ ಹಿಲಾಲ್ ದೊಡ್ಡ ಮೊತ್ತ ನೀಡಿ ಎಂಬಾಪೆಯವರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದೆ. ಸೌದಿ ಅರೇಬಿಯಾದ ಕ್ಲಬ್ ಎಂಬಾಪೆಯವರನ್ನು ಸಂಪರ್ಕಿಸಲು ಮುಂದಾಗಿರುವುದನ್ನು ಪಿಎಸ್ಜಿ ಕ್ಲಬ್ ದೃಢಪಡಿಸಿದೆ.
ಅಲ್ ಹಿಲಾಲ್ ಕ್ಲಬ್ ಇತ್ತೀಚೆಗೆ ಅರ್ಜೆಂಟೀನದ ಸ್ಟ್ರೈಕರ್ ಲಿಯೊನೆಲ್ ಮೆಸ್ಸಿಗೆ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಳ್ಳಲು ವಿಫಲ ಯತ್ನ ನಡೆಸಿತ್ತ್ತು