×
Ad

ಒಂದೇ ಓವರ್ ನಲ್ಲಿ 39 ರನ್: ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ!

Update: 2024-08-20 16:03 IST

PC : X 

ಹೊಸದಿಲ್ಲಿ: ಸಮೋವಾ ತಂಡದ ವಿಕೆಟ್ ಕೀಪರ್, ಬ್ಯಾಟರ್ ಡೇರಿಯಸ್ ವಿಸ್ಸೆರ್ ಪುರುಷರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹದಿನೇಳು ವರ್ಷಗಳಿಂದ ಇದ್ದ ಯುವರಾಜ್ ಸಿಂಗ್ ಅವರ ವಿಶ್ವದಾಖಲೆ ಪುಡಿಗಟ್ಟಿದ್ದಾರೆ.

ವನುವತು ವಿರುದ್ಧ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಉಪ ಪ್ರಾದೇಶಿಕ ಪೂರ್ವ ಏಶ್ಯ- ಫೆಸಿಫಿಕ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ವನಿವತು ತಂಡದ ವೇಗದ ಬೌಲರ್ ನಲಿನ್ ನಿಪಿಕೊ ಅವರು ಒಂದೇ ಓವರ್‌ ನಲ್ಲಿ 39 ರನ್‌ ಬಿಟ್ಟು ಕೊಟ್ಟರು. ನಿಪಿಕೊ ಅವರ ಓವರ್‌ ನಲ್ಲಿ ವಿಸ್ಸೆರ್ ಆರು ಸಿಕ್ಸರ್‌ ಬಾರಿಸಿ ದಾಖಲೆ ಬರೆದರು.

ಎ ಗುಂಪಿನ ಅರ್ಹತಾ ಪಂದ್ಯದ 15ನೇ ಓವರ್ ನಲ್ಲಿ ವಿಸ್ಸೆರ್ ಆರು ಸಿಕ್ಸರ್ ಗಳನ್ನು ಸಿಡಿಸಿದರು. ವನಿವತು ತಂಡದ ವೇಗದ ಬೌಲರ್ ನಲಿನ್ ನಿಪಿಕೊ ಅವರ ನೋಬಾಲ್‍ನಲ್ಲಿ ಮೂರು ರನ್ ನೀಡಿದರು.

2007ರ ಐಸಿಸಿ ಟಿ20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಯುವರಾಜ್ ಸಿಂಗ್ ಆರು ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇತ್ತೀಚೆಗೆ ಕಿರನ್ ಪೋಲಾರ್ಡ್ (2021), ನಿಕೋಲಸ್ ಪೂರನ್ (2024) ಮತ್ತು ದೀಪೇಂದ್ರ ಸಿಂಗ್ ಐರೀ (2024) ಈ ಸಾಧನೆಯನ್ನು ಸರಿಗಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News