×
Ad

4ನೇ ಟ್ವೆಂಟಿ-20: ಶಿಮ್ರೋನ್ ಹೆಟ್ಮೆಯರ್ ಅರ್ಧಶತಕ; ಭಾರತದ ಗೆಲುವಿಗೆ 179 ರನ್ ಗುರಿ ನೀಡಿದ ವಿಂಡೀಸ್

Update: 2023-08-12 21:48 IST

Shimron Hetmyer .| Photo: Twitter \ @ICC

ಫ್ಲೋರಿಡಾ: ಶಿಮ್ರೋನ್ ಹೆಟ್ಮೆಯರ್(61 ರನ್, 39 ಎಸೆತ) ಹಾಗೂ ಶಾಯ್ ಹೋಪ್(45 ರನ್, 29 ಎಸೆತ)ನೆರವಿನಿಂದ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ನಾಲ್ಕನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 179 ರನ್ ಗುರಿ ನೀಡಿದೆ.

ಶನಿವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 178 ರನ ಗಳಿಸಿತು.

ವಿಂಡೀಸ್ ಎಂದಿನಂತೆ 57 ರನ್‌ಗೆ 4 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಹೋಪ್ ಹಾಗೂ ಹೆಟ್ಮೆಯರ್ 5ನೇ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಹೋಪ್ ಔಟಾದ ನಂತರ ಹೆಟ್ಮೆಯರ್ 8ನೇ ವಿಕೆಟ್ ಜೊತೆಯಾಟದಲ್ಲಿ ಒಡಿಯನ್ ಸ್ಮಿತ್(ಔಟಾಗದೆ 15) ಅವರೊಂದಿಗೆ 44 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಭಾರತದ ಪರ ವೇಗದ ಬೌಲರ್ ಅರ್ಷದೀಪ್ ಸಿಂಗ್(3-38) ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಕುಲದೀಪ್ ಯಾದವ್(2-26)ಎರಡು ವಿಕೆಟ್ ಪಡೆದರು.

ಮುಕೇಶ ಕುಮಾರ್(1-25), ಯಜುವೇಂದ್ರ ಚಹಾಲ್(1-36) ಹಾಗೂ ಅಕ್ಷರ್ ಪಟೇಲ್(1-39) ತಲಾ ಒಂದು ವಿಕೆಟ್ ಉರುಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News