ಐದನೇ ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯ ವಿರುದ್ದ ಇಂಗ್ಲೆಂಡ್ ಗೆ ರೋಚಕ ಜಯ
ದಿ ಓವಲ್: ಆರಂಭಿಕ ಬ್ಯಾಟರ್ ಗಳಾದ ಉಸ್ಮಾನ್ ಖ್ವಾಜಾ(72 ರನ್), ಡೇವಿಡ್ ವಾರ್ನರ್ (60 ರನ್), ಮಾಜಿ ನಾಯಕ ಸ್ಟೀವನ್ ಸ್ಮಿತ್ (54 ರನ್) ಅಗ್ರ ಕ್ರಮಾಂಕದಲ್ಲಿ ಉತ್ತಮ ಕೊಡುಗೆ ನೀಡಿದ ಹೊರತಾಗಿಯೂ ಕ್ರಿಸ್ ವೋಕ್ಸ್ (4-50) ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 49 ರನ್ ಅಂತರದಿಂದ ಸೋಲುಂಡಿದೆ.
ಮಳೆ ಬಾಧಿತ ಪಂದ್ಯದಲ್ಲಿ ಕೊನೆಯ ದಿನದಾಟವಾದ ಸೋಮವಾರ ಗೆಲ್ಲಲು 384 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡ 94.4 ಓವರ್ ಗಳಲ್ಲಿ 334 ರನ್ ಗಳಿಸಿ ಆಲೌಟಾಗಿದೆ.
ವೋಕ್ಸ್ ಯಶಸ್ವಿ ಪ್ರದರ್ಶನ ನೀಡಿದರೆ, ಮೊಯಿನ್ ಅಲಿ (3-76) ಮೂರು ವಿಕೆಟ್ ಉರುಳಿಸಿದರು.
ಈ ಫಲಿತಾಂಶದೊಂದಿಗೆ ಸರಣಿಯು 2-2ರಿಂದ ಸಮಬಲಗೊಂಡಿದೆ. ಕ್ರಿಸ್ ವೋಕ್ಸ್ ಪಂದ್ಯಶ್ರೇಷ್ಠ ಹಾಗೂ ಮಿಚೆಲ್ ಸ್ಟಾರ್ಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ವಿದಾಯದ ಪಂದ್ಯವನ್ನಾಡಿದ ಹಿರಿಯ ಬೌಲರ್ ಸ್ಟುವರ್ಟ್ ಬ್ರಾಡ್ ಗೆ ಗೆಲುವಿನ ಉಡುಗೊರೆ ನೀಡಿದೆ