×
Ad

ಪಿಚ್ನೊಳಗೆ ನುಗ್ಗಿ ರೋಹಿತ್ ಕಾಲು ಸ್ಪರ್ಶಿಸಿದ ಕೊಹ್ಲಿ ಅಭಿಮಾನಿ

Update: 2024-01-25 22:12 IST

Photo: PTI

ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ನ ಮೊದಲ ದಿನವಾದ ಗುರುವಾರ ಭಾರತದ ನಾಯಕ ರೋಹಿತ್ ಶರ್ಮಾರನ್ನು ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ ಅನಿರೀಕ್ಷಿತವಾಗಿ ಮುಖಾಮುಖಿಯಾಗಿ ಅಚ್ಚರಿ ಮೂಡಿಸಿದ್ದಾನೆ.

ಭಾರತದ ಇನಿಂಗ್ಸ್ ವೇಳೆ ಈ ಘಟನೆ ನಡೆದಿದೆ. ಭದ್ರತೆಯನ್ನು ಉಲ್ಲಂಘಿಸಿದ ಕೊಹ್ಲಿ ಅಭಿಮಾನಿಯೊಬ್ಬ ಪಿಚ್ನೊಳಗೆ ನುಸುಳಿದ್ದಾನೆ. ಭಾರತದ ನಾಯಕ ರೋಹಿತ್ ಅವರ ಕೈಗಳನ್ನು ಕುಲುಕಿ, ಅವರ ಪಾದ ಸ್ಪರ್ಶಿಸಿರುವುದು ಕಂಡುಬಂದಿದೆ.

ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಮ್ ನೊಳಗೆ ನುಗ್ಗಿದ ಅಭಿಮಾನಿ ಕೊಹ್ಲಿ ಹೆಸರಿದ್ದ ಜರ್ಸಿ ಧರಿಸಿದ್ದ. ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ನುಸುಳುಕೋರನನ್ನು ಮೈದಾನದಿಂದ ಹೊರಗೆ ಕರೆದೊಯ್ಯುವ ಮೊದಲು ರೋಹಿತ್ ಆತನೊಂದಿಗೆ ನಯ ವಿನಯದಿಂದ ನಡೆದುಕೊಂಡರು.

ರೋಹಿತ್ ಮೊದಲ ಟೆಸ್ಟ್ನಲ್ಲಿ 24 ರನ್ ಗಳಿಸಿ ಔಟಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News