ಅಖಿಲ ಭಾರತ ಬುಚಿ ಬಾಬು ಆಹ್ವಾನಿತ ಪಂದ್ಯಾವಳಿ | ಮಹಾರಾಷ್ಟ್ರ ತಂಡ ಪ್ರಕಟ, ಗಾಯಕ್ವಾಡ್, ಪೃಥ್ವಿ ಶಾಗೆ ಮಣೆ
Photo | X.com
ಹೊಸದಿಲ್ಲಿ, ಆ.14: ಭಾರತದ ಬ್ಯಾಟರ್ ಗಳಾದ ಋತುರಾಜ್ ಗಾಯಕ್ವಾಡ್ ಹಾಗೂ ಪೃಥ್ವಿ ಶಾ ಅವರು ಚೆನ್ನೈನಲ್ಲಿ ಆಗಸ್ಟ್ 18ರಿಂದ ಸೆಪ್ಟಂಬರ್ 9ರ ತನಕ ನಡೆಯಲಿರುವ ಅಖಿಲ ಭಾರತ ಬುಚಿ ಬಾಬು ಆಹ್ವಾನಿತ ಕ್ರಿಕೆಟ್ ಪಂದ್ಯಾವಳಿಗಾಗಿ ಮಹಾರಾಷ್ಟ್ರ ತಂಡ ಪ್ರಕಟಿಸಿರುವ 17 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂಕಿತ್ ಭವಾನೆ ತಂಡದ ಚುಕ್ಕಾಣಿ ಹಿಡಿದಿದ್ದಾರೆ.
ದೇಶೀಯ ಋತುವಿಗಿಂತ ಮೊದಲು ಮುಂಬೈನಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಂಡಿರುವ ಶಾ ಪಾಲಿಗೆ ಇದು ಮೊದಲ ಪ್ರಮುಖ ಟೂರ್ನಿಯಾಗಿದೆ. ಈ ಹಿಂದೆ ಮುಂಬೈ ತಂಡದೊಂದಿಗೆ ಆಡುತ್ತಿದ್ದಾಗ ರನ್ ಬರ ಎದುರಿಸಿದ್ದ ಶಾ ಅವರು ಫಿಟ್ನೆಸ್ ಹಾಗೂ ಅಶಿಸ್ತಿನ ಕಾರಣಕ್ಕೆ ತಂಡದಿಂದ ಕೈಬಿಡಲ್ಪಟ್ಟಿದ್ದರು.
ದುಲೀಪ್ ಟ್ರೋಫಿಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಪಶ್ಚಿಮ ವಲಯ ತಂಡವನ್ನು ಸೇರಿಕೊಳ್ಳುವ ಮೊದಲು ಗಾಯಕ್ವಾಡ್ ಹಾಗೂ ವಿಕೆಟ್ ಕೀಪರ್ ಸೌರಭ್ ನವಾಲೆ ಕೇವಲ ಒಂದು ಪಂದ್ಯಕ್ಕೆ ಲಭ್ಯವಿರುವ ನಿರೀಕ್ಷೆ ಇದೆ.
ಪಶ್ಚಿಮ ವಲಯ ಸೆಮಿ ಫೈನಲ್ಸ್ ಗೆ ನೇರ ಪ್ರವೇಶ ಪಡೆದಿದ್ದು, ಸೆಪ್ಟಂಬರ್ 4ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಮಹಾರಾಷ್ಟ್ರ ತಂಡ:
ಅಂಕಿತ್ ಬವಾನೆ(ನಾಯಕ), ಋತುರಾಜ್ ಗಾಯಕ್ವಾಡ್, ಪೃಥ್ವಿ ಶಾ, ಸಿದ್ದೇಶ್ ವೀರ್, ಸಚಿನ್ ದಾಸ್, ಅರ್ಶಿನ್ ಕುಲಕರ್ಣಿ, ಹರ್ಷಲ್ ಕೇಟ್, ಸಿದ್ದಾರ್ಥ್ ಮ್ಹಾತ್ರೆ, ಸೌರಭ್ ನವಾಲೆ(ವಿಕೆಟ್ ಕೀಪರ್), ಮಂಧಾರ್ ಭಂಡಾರಿ(ವಿಕೆಟ್ ಕೀಪರ್), ರಾಮಕೃಷ್ಣ ಘೋಷ್, ಮುಕೇಶ್ ಚೌಧರಿ, ಪ್ರದೀಪ್ ದಾಧೆ, ವಿಕ್ಕಿ ಒಸ್ವಾಲ್, ಹಿತೇಶ್ ವಲುಂಜ್, ಪ್ರಶಾಂತ್ ಸೋಲಂಕಿ, ರಾಜವರ್ಧನ್.