×
Ad

ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ಇತಿಹಾಸ ನಿರ್ಮಿಸಿದ ಆಂಧ್ರ ಬ್ಯಾಟರ್!

Update: 2024-02-21 19:13 IST

ಕಡಪ: ಇಲ್ಲಿ ನಡೆದ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿಯ ರೈಲ್ವೇಸ್ ಎದುರಿನ ಪಂದ್ಯದಲ್ಲಿ ಆಂಧ್ರಪ್ರದೇಶದ ಬ್ಯಾಟರ್ ವಂಶಿ ಕೃಷ್ಣ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ರೈಲ್ವೇಸ್ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಎಸೆದ ಓವರ್‌ನಲ್ಲಿ ಸತತ ಆರು ಸಿಕ್ಸರ್ ಸಿಡಿಸಿದ ವಂಶಿ ಕೃಷ್ಣ, ಕೇವಲ 64 ಬಾಲ್‌ಗಳಲ್ಲಿ 110 ರನ್‌ಗಳನ್ನು ಸಿಡಿಸಿದರು.

ಈ ಪಂದ್ಯದ ವೀಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡಾ ಹಂಚಿಕೊಂಡಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈವರೆಗೆ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್ ಸಿಡಿಸಿರುವ ಬ್ಯಾಟರ್‌ಗಳೆಂದರೆ ವೆಸ್ಟ್ ಇಂಡೀಸ್ ತಂಡದ ಗ್ಯಾರಿ ಸೋಬರ್ಸ್, ಭಾರತ ತಂಡದ ಯುವರಾಜ್ ಸಿಂಗ್, ರವಿ ಶಾಸ್ತ್ರಿ ಹಾಗೂ ದಕ್ಷಿಣ ಆಫ್ರಿಕಾ ತಂಡದ ಹರ್ಷೆಲ್ ಗಿಬ್ಸ್ ಆಗಿದ್ದಾರೆ. ಇವರ ಸಾಲಿಗೆ ಇದೀಗ ಆಂಧ್ರಪ್ರದೇಶದ ಬ್ಯಾಟರ್ ವಂಶಿ ಕೃಷ್ಣ ಕೂಡಾ ಸೇರ್ಪಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News