ವೃತ್ತಿಪರ ಟೆನಿಸ್ ನಿಂದ ಅರ್ಜೆಂಟೀನದ ಡಿಯಾಯೊ ಶ್ವರ್ಟ್ಜ್‌ಮನ್ ನಿವೃತ್ತಿ
Photo Credit | X/@diegoschwartzm3
ಬ್ಯುನಸ್ ಐರಿಸ್: ಅರ್ಜೆಂಟೀನ ಆಟಗಾರ ಡಿಯಾಗೊ ಶ್ವರ್ಟ್ಜ್‌ಮನ್ ತನ್ನ ವೃತ್ತಿಪರ ಟೆನಿಸ್ ಜೀವನದಿಂದ ನಿವೃತ್ತಿಯಾಗಿದ್ದಾರೆ.
ಅರ್ಜೆಂಟೀನ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಪೆಡ್ರೊ ಮಾರ್ಟಿನೆಝ್ ವಿರುದ್ಧ ಸೋತ ನಂತರ ವಿಶ್ವದ ಮಾಜಿ ನಂ.8ನೇ ಆಟಗಾರ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ.
386ನೇ ರ್ಯಾಂಕಿನ ಆಟಗಾರ ಶ್ವರ್ಟ್ಜ್‌ಮನ್ ಮೊದಲ ಸುತ್ತಿನ ಪಂದ್ಯದಲ್ಲಿ 40ನೇ ರ್ಯಾಂಕಿನ ನಿಕೊಲಸ್ ಜರ್ರಿ ಅವರನ್ನು ಮೂರು ಸೆಟ್‌ಗಳ ಅಂತರದಿಂದ ಸೋಲಿಸಿ ಅಚ್ಚರಿ ಫಲಿತಾಂಶ ದಾಖಲಿಸಿದರು. 16 ತಿಂಗಳ ನಂತರ ಮೊದಲ ಗೆಲುವು ದಾಖಲಿಸಿದ್ದರು.
ಆದರೆ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಶ್ವರ್ಟ್ಜ್‌ಮನ್ ವಿರುದ್ಧ 41ನೇ ರ್ಯಾಂಕಿನ ಮಾರ್ಟಿನೆಝ್ 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಅರ್ಜೆಂಟೀನ ಆಟಗಾರನ ವೃತ್ತಿಜೀವನಕ್ಕೆ ತೆರೆ ಎಳೆದರು.
ಇದು ನನ್ನ ಕೊನೆಯ ಪಂದ್ಯಾವಳಿಯಾಗಿದೆ ಎಂದು ಶ್ವರ್ಟ್ಜ್‌ಮನ್ ಈ ಮೊದಲೇ ಘೋಷಿಸಿದ್ದರು.
ಟೆನಿಸ್ ಕ್ರೀಡೆ ಆಡುತ್ತಿರುವ ಕುಳ್ಳ ಪುರುಷರ ಆಟಗಾರರ ಪೈಕಿ ಒಬ್ಬರಾಗಿರುವ 32ರ ಹರೆಯದ ಶ್ವರ್ಟ್ಝ್‌ಮನ್ 2020ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಅದೇ ವರ್ಷ ರೋಮ್‌ನಲ್ಲಿ ನಡೆದಿದ್ದ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ಸೂಪರ್‌ಸ್ಟಾರ್ ರಫೆಲ್ ನಡಾಲ್‌ರನ್ನು ಸೋಲಿಸಿ ವಿಶ್ವದ ಗಮನ ಸೆಳೆದಿದ್ದರು.
ತನ್ನ ವೃತ್ತಿಬದುಕಿನಲ್ಲಿ ನಾಲ್ಕು ಎಟಿಪಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇದರಲ್ಲಿ 2021ರ ಅರ್ಜೆಂಟೀನ ಓಪನ್ ಪ್ರಶಸ್ತಿಯೂ ಸೇರಿದೆ.