×
Ad

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ ಡ್ರಾ ಸಾಧಿಸಿದ ಭಾರತ

Update: 2023-08-05 07:37 IST

Photo: twitter.com/TheHockeyIndia 

ಚೆನ್ನೈ: ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ, ಜಪಾನ್ ತಂಡದ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿದೆ.

ಪಂದ್ಯದ ಎರಡನೇ ಅವಧಿಯಲ್ಲಿ ಜಪಾನ್‍ನ ಕೆನ್ ನಗಯೋಶಿ ಆರಂಭಿಕ ಗೋಲು ಹೊಡೆದರು. ಹರಮ್‍ಪ್ರೀತ್ ಮೂರನೇ ಅವಧಿಯಲ್ಲಿ ಗೋಲು ಸಾಧಿಸುವ ಮೂಲಕ ಸಮಬಲ ಸಾಧಿಸಲು ನೆರವಾದರು. ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಮೊದಲ ಅವಧಿಯಲ್ಲಿ ಭಾರತ ಎಂಟು ಪೆನಾಲ್ಟಿ ಕಾರ್ನರ್‍ಗಳ ಅವಕಾಶ ಪಡೆಯಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.

ಎರಡನೇ ಅವಧಿಯಲ್ಲೂ ಭಾರತ ಪ್ರಾಬಲ್ಯ ಮೆರೆಯಿತು. ಆದರೆ ಇಲ್ಲೂ ಗೋಲು ಗಳಿಸಲು ವಿಫಲವಾಯಿತು. ಈ ಹಂತದಲ್ಲಿ ಜಪಾನ್ ಮುನ್ನಡೆ ಸಾಧಿಸಿತು. ಮೂರನೇ ಅವಧಿಯಲ್ಲಿ ಗೋಲು ಗಳಿಸಲು ಭಾರತ ಹರಸಾಹಸ ಮಾಡಿತು. ಈ ಹಂತದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಸಾಧಿಸುವಲ್ಲಿ ಯಶಸ್ವಿಯಾಯಿತು. ನಾಲ್ಕನೇ ಅವಧಿಯಲ್ಲೂ ಭಾರತ ಗೋಲು ಗಳಿಸುವ ಪ್ರಯತ್ನ ನಡೆಸಿತಾದರೂ, ಜಪಾನ್‍ನ ರಕ್ಷಣಾ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಮುಕ್ತಾಯಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News