×
Ad

ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ 5-0 ಗೆಲುವು ದಾಖಲಿಸಿದ ಭಾರತ ಫೈನಲ್‌ಗೆ, ಮಲೇಶ್ಯ ಎದುರಾಳಿ

Update: 2023-08-11 22:14 IST

Akashdeep Singh, Photo: sportstar 

ಚೆನ್ನೈ, ಆ.11: ಜಪಾನ್ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದೆ.

ಐದನೇ ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ತಲುಪಿರುವ 3 ಬಾರಿಯ ಚಾಂಪಿಯನ್ ಭಾರತ ಶನಿವಾರ (ಆ.12) ಮಲೇಶ್ಯವನ್ನು ಎದುರಿಸಲಿದೆ. 4ನೇ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಲು ಸಜ್ಜಾಗಿದೆ.

ಮೇಯರ್ ರಾಧಾಕೃಷ್ಣ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ 2ನೇ ಸೆಮಿ ಫೈನಲ್ ಪಂದ್ಯದುದ್ದಕ್ಕೂ ಭಾರತ ಮೇಲುಗೈ ಸಾಧಿಸಿತು.

ಆಕಾಶ್‌ದೀಪ್ ಸಿಂಗ್ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಗೋಲು ಖಾತೆ ತೆರೆದರು.ನಾಯಕ ಹರ್ಮನ್‌ಪ್ರೀತ್ ಸಿಂಗ್(23ನೇ ನಿಮಿಷ), ಮನ್‌ದೀಪ್ ಸಿಂಗ್(30ನೇ ನಿಮಿಷ) , ಸುಮಿತ್ (39ನೇ ನಿಮಿಷ) ಹಾಗೂ ಸ್ಥಳೀಯ ಆಟಗಾರ ಕಾರ್ತಿ ಸೆಲ್ವಂ (51ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಭಾರತಕ್ಕೆ 5-0 ಗೆಲುವು ತಂದುಕೊಟ್ಟರು. ಸುಮಿತ್ ಅವರು ಮನ್‌ಪ್ರೀತ್ ನೆರವಿನಿಂದ ಆಕರ್ಷಕ ರಿವರ್ಸ್ ಸ್ಟಿಕ್ ಮೂಲಕ ಗೋಲು ಗಳಿಸಿದರು.

ಭಾರತದ ಹಾಕಿ ದಂತಕತೆ ಪಿ.ಆರ್. ಶ್ರೀಜೇಶ್ ಇಂದು 300ನೇ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿ ಮೈಲಿಗಲ್ಲು ತಲುಪಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News