×
Ad

ಎಟಿಪಿ ರ‍್ಯಾಂಕಿಂಗ್: ಸುಮಿತ್ ನಾಗಲ್ ಜೀವನಶ್ರೇಷ್ಠ ಸಾಧನೆ

Update: 2024-04-15 20:11 IST

ಸುಮಿತ್ ನಾಗಲ್ | PC : PTI  

ಹೊಸದಿಲ್ಲಿ: ಮೋಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸುಮಿತ್ ನಾಗಲ್ ಸೋಮವಾರ ಬಿಡುಗಡೆಯಾದ ಎಟಿಪಿ ರ‍್ಯಾಂಕಿಂಗ್ ನಲ್ಲಿ 80ನೇ ಸ್ಥಾನ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

26ರ ಹರೆಯದ ನಾಗಲ್ ಇಟಲಿಯ ಫ್ಲಾವಿಯೊ ಕೊಬೊಲಿ ಹಾಗೂ ಅರ್ಜೆಂಟೀನದ ಫಾಕುಂಡೊ ಡಿಯಾಝ್ರನ್ನು ಮಣಿಸಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದರು. ಆವೆಮಣ್ಣಿನಲ್ಲಿ ನಡೆದ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಜಯ್ ಅಮೃತ್ರಾಜ್(1977) ಹಾಗೂ ರಮೇಶ್ ಕೃಷ್ಣನ್ (1982) ನಂತರ ಪ್ರಧಾನ ಸುತ್ತಿಗೇರಿದ ಭಾರತದ ಮೂರನೇ ಆಟಗಾರನಾಗಿದ್ದಾರೆ.

ಆವೆಮಣ್ಣಿನ ಅಂಗಣದಲ್ಲಿ ಎಟಿಪಿ ಮಾಸ್ಟರ್ಸ್-1000 ಟೂರ್ನಿಯ ಮೊದಲ ಸುತ್ತಿನಲ್ಲಿ ಇಟಲಿಯ ವಿಶ್ವದ ನಂ.38ನೇ ಆಟಗಾರ ಮ್ಯಾಟೆಯೊ ಅರ್ನಾಲ್ಡಿ ಅವರನ್ನು ಮಣಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳುವ ಮೂಲಕ ನಾಗಲ್ ಇತಿಹಾಸ ನಿರ್ಮಿಸಿದ್ದರು. ಆದರೆ ಅವರು ಎರಡನೇ ಸುತ್ತಿನಲ್ಲಿ ಕಳೆದ ವರ್ಷದ ರನ್ನರ್ಸ್ ಅಪ್ ಹೊಲ್ಗರ್ ರೂನ್ ಅವರನ್ನು ಮೂರು ಸೆಟ್ ಗಳ ಅಂತರದಿಂದ ಸೋಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಎಟಿಪಿ ರ‍್ಯಾಂಕಿಂಗ್ ನಲ್ಲಿ 13 ಸ್ಥಾನ ಮೇಲಕ್ಕೇರಿದ್ದಾರೆ.

ವಿಜಯ್ ಅಮೃತ್ರಾಜ್(1980ರಲ್ಲಿ ಜೀವನಶ್ರೇಷ್ಠ 18), ರಮೇಶ್ ಕೃಷ್ಣನ್(1985ರಲ್ಲಿ ಜೀವನಶ್ರೇಷ್ಠ 23), ಸೋಮ್ದೇವ್ ದೇವ್ವರ್ಮನ್(2011ರಲ್ಲಿ ಜೀವನಶ್ರೇಷ್ಠ 62), ಶಶಿ ಮೆನನ್(1975ರಲ್ಲಿ ಜೀವನಶ್ರೇಷ್ಠ 71), ಆನಂದ್ ಅಮೃತ್ರಾಜ್(1974ರಲ್ಲಿ ಜೀವನಶ್ರೇಷ್ಠ 74) ಹಾಗೂ ಪ್ರಜ್ಞೇಶ್ ಗುಣೇಶ್ವರನ್(2019ರಲ್ಲಿ ಜೀವನಶ್ರೇಷ್ಠ 75)ನಂತರ ಪ್ರಜ್ಞೇಶ್ ಅವರು 7ನೇ ಅತ್ಯುತ್ತಮ ರ‍್ಯಾಂಕ್ ತಲುಪಿದ ಭಾರತದ ಆಟಗಾರನಾಗಿದ್ದಾರೆ.

ಇದೇ ವೇಳೆ ರೋಹನ್ ಬೋಪಣ್ಣ ಅವರು ಡಬಲ್ಸ್ ರ‍್ಯಾಂಕಿಂಗ್ ನಲ್ಲಿ ನಂ.1 ಸ್ಥಾನವನ್ನು ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ಗೆ ಬಿಟ್ಟುಕೊಟ್ಟಿದ್ದಾರೆ. ಅಗ್ರ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯದ ಜೋಡಿ ಮೋಂಟೆ ಕಾರ್ಲೊ ಟೂರ್ನಿಯಲ್ಲಿ ಅಂತಿಮ-16ರ ಸುತ್ತಿನಿಂದ ನಿರ್ಗಮಿಸಿದ್ದರು.

ಎಟಿಪಿ ಟಾಪ್-10

ನೊವಾಕ್ ಜೊಕೊವಿಕ್(ಸರ್ಬಿಯ)

ಜನ್ನಿಕ್ ಸಿನ್ನೆರ್(ಇಟಲಿ)

ಕಾರ್ಲೊಸ್ ಅಲ್ಕರಾಝ್(ಸ್ಪೇನ್)

ಡೇನಿಯಲ್ ಮೆಡ್ವೆಡೆವ್(ರಶ್ಯ)

ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ)

ಕಾಸ್ಪರ್ ರೂಡ್(ನಾರ್ವೆ)

ಸ್ಟೆಫನೊಸ್ ಸಿಟ್ಸಿಪಾಸ್(ಗ್ರೀಕ್)

ಆ್ಯಂಡ್ರೆ ರುಬ್ಲೆವ್(ರಶ್ಯ)

ಹ್ಯೂಬರ್ಟ್ ಹರ್ಕಾಝ್(ಪೋಲ್ಯಾಂಡ್)

ಗ್ರಿಗೊರ್ ಡಿಮಿಟ್ರೋವ್(ಬಲ್ಗೇರಿಯ)

*ಡಬಲ್ಸ್ ರ‍್ಯಾಂಕಿಂಗ್ ನಲ್ಲಿ ಭಾರತೀಯರು

ರೋಹನ್ ಬೋಪಣ್ಣ-2ನೇ ರ‍್ಯಾಂಕ್

ಯೂಕಿ ಭಾಂಬ್ರಿ-59ನೇ ರ‍್ಯಾಂಕ್

ಶ್ರೀರಾಮ್ ಬಾಲಾಜಿ-99ನೇ ರ‍್ಯಾಂಕ್

ಎನ್.ವಿಜಯ್ ಸುಂದರ್ ಪ್ರಶಾಂತ್-100ನೇ ರ‍್ಯಾಂಕ್

ಅರ್ಜುನ್ ಖಾಡೆ-102ನೇ ರ‍್ಯಾಂಕ್

ಅನಿರುದ್ಧ ಚಂದ್ರಶೇಖರ-115ನೇ ರ‍್ಯಾಂಕ್

ಸಾಕೇತ್ ಮೈನೇನಿ-120ನೇ ರ‍್ಯಾಂಕ್

ನಿಕಿ ಪೂಣಚ-124ನೇ ರ‍್ಯಾಂಕ್

ಜೀವನ್-127ನೇ ರ‍್ಯಾಂಕ್

ರಿತ್ವಿಕ್ ಚೌಧರಿ-134ನೇ ರ‍್ಯಾಂಕ್

ರಾಮ್ಕುಮಾರ್ ರಾಮನಾಥನ್-156ನೇ ರ‍್ಯಾಂಕ್

ಸಿಂಗಲ್ಸ್

ಸುಮಿತ್ ನಾಗಲ್-80ನೇ ರ‍್ಯಾಂಕ್

ರಾಮಕುಮಾರ್ ರಾಮನಾಥನ್-358ನೇ ರ‍್ಯಾಂಕ್

ಮುಕುಂದ್ ಶಶಿಕುಮಾರ್-450 ರ‍್ಯಾಂಕ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News