×
Ad

ಆಸ್ಟ್ರೇಲಿಯ ವಿರುದ್ಧ ಪಂದ್ಯಕ್ಕೆ ಫಖರ್ ಝಮಾನ್, ಸಲ್ಮಾನ್ ಅಲಿ ಅಲಭ್ಯ

Update: 2023-10-19 20:39 IST

ಫಖರ್ ಝಮಾನ್ | Photo Credit: AP

ಬೆಂಗಳೂರು: ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಆರಂಭಿಕ ಬ್ಯಾಟರ್ ಫಖರ್ ಝಮಾನ್ ಹಾಗೂ ಆಲ್‌ರೌಂಡರ್ ಸಲ್ಮಾನ್ ಅಲಿ ಅಘಾ ಅವರಿಲ್ಲದೆ ಕಣಕ್ಕಿಳಿಯಲಿದೆ. ಈ ಇಬ್ಬರು ಆಸೀಸ್ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಝಮಾನ್ ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಅಲಿ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಫಖರ್ ಝಮಾನ್ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಮುಂದಿನ ವಾರ ಲಭ್ಯವಿರುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ ಅಭ್ಯಾಸ ನಡೆಸುತ್ತಿದ್ದಾಗ ಸಲ್ಮಾನ್ ಅಲಿಗೆ ಜ್ವರ ಕಾಣಿಸಿಕೊಂಡಿತ್ತು. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. 15 ಸದಸ್ಯರ ತಂಡದಲ್ಲಿರುವ ಉಳಿದೆಲ್ಲಾ ಆಟಗಾರರು ಆರೋಗ್ಯವಾಗಿದ್ದಾರೆ ಎಂದು ಪಾಕಿಸ್ತಾನದ ಮೀಡಿಯಾ ಮ್ಯಾನೇಜರ್ ಗುರುವಾರ ತಿಳಿಸಿದ್ದಾರೆ.

ಅಬ್ದುಲ್ಲಾ ಶಫೀಕ್ ಅವರು ಝಮಾನ್ ಬದಲಿಗೆ ಆರಂಭಿಕ ಆಟಗಾರನಾಗಿ ಇನಿಂಗ್ಸ್ ಆರಂಭಿಸುತ್ತಿದ್ದು ಶ್ರೀಲಂಕಾ ವಿರುದ್ಧ 113 ರನ್ ಹಾಗೂ ಭಾರತ ವಿರುದ್ಧ 20 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News