×
Ad

ಕೆನಡಿಯನ್ ಓಪನ್: ಮಿನೌರ್ ಮಣಿಸಿದ ಸಿನ್ನೆರ್ ಚಾಂಪಿಯನ್

Update: 2023-08-14 22:49 IST

ಜನ್ನಿಕ್ ಸಿನ್ನೆರ್ | Photo : PTI

ಟೊರಂಟೊ: ಇಟಲಿಯ 7ನೇ ಶ್ರೇಯಾಂಕದ ಜನ್ನಿಕ್ ಸಿನ್ನೆರ್ ಕೆನಡಿಯನ್ ಓಪನ್ ಫೈನಲ್ನಲ್ಲಿ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. ಇದರೊಂದಿಗೆ ಮೊದಲ ಬಾರಿ ಮಾಸ್ಟರ್ಸ್-1000 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ರವಿವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿನ್ನರ್ ಅವರು ಮಿನೌರ್ರನ್ನು 6-4, 6-1 ನೇರ ಸೆಟ್ಗಳ ಅಂತರದಿಂದ ಸೋಲಿಸಿದರು. 21ರ ಹರೆಯದ ಸಿನ್ನೆರ್ ಮೂರನೆ ಬಾರಿ ಮಾಸ್ಟರ್ಸ್-1000 ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. 2021 ಹಾಗೂ 2023ರಲ್ಲಿ ಮಿಯಾಮಿ ಓಪನ್ನಲ್ಲಿ ಫೈನಲ್ ತಲುಪಿದ್ದ ಸಿನ್ನೆರ್ ರನ್ನರ್ಸ್ ಅಪ್ಗೆ ತೃಪ್ತಿಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News