ಚಾಂಪಿಯನ್ಸ್ ಟ್ರೋಫಿ ಫೈನಲ್ | ಆರಂಭಿಕ 3 ವಿಕೆಟ್ ಕಳೆದುಕೊಂಡ ನ್ಯೂಝಿಲ್ಯಾಂಡ್
PC | @ICC
ದುಬೈ : ದುಬೈ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿದೆ. ಕುಲ್ದೀಪ್ ಯಾದವ್ 2 ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ರಚಿನ್ ರವೀಂದ್ರ ಮತ್ತು ವಿಲ್ ಯಂಗ್ 57 ರನ್ ಗಳ ಆರಂಭಿಕ ಜೊತೆಯಾಟವನ್ನು ನೀಡಿದರೂ, 7.5ನೇ ಓವರ್ ನಲ್ಲಿ ವರುಣ್ ಚಕ್ರವರ್ತಿ ಅವರು ವಿಲ್ ಯಂಗ್ ಅವರ ವಿಕೆಟ್ ಪಡೆದರು.
ನಂತರ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್, ರಚಿನ್ ರವೀಂದ್ರ ಅವರನ್ನು ತನ್ನ ಮೊದಲ ಎಸೆತದಲ್ಲಿಯೇ ಡಕ್ ಔಟ್ ಮಾಡಿದರು. ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಕುಲ್ದೀಪ್ ಯಾದವ್ 2ನೇ ವಿಕೆಟ್ ಪಡೆದರು.
19 ಓವರ್ ಗಳ ಅಂತ್ಯದಲ್ಲಿ ನ್ಯೂಜಿಲೆಂಡ್ ತಂಡವು 99/3 ರನ್ ಗಳಿಸಿದೆ.
ಡ್ಯಾರಿಲ್ ಮಿಚೆಲ್ (16) ಮತ್ತು ಟಾಮ್ ಲಾಥಮ್ (11) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಕುಲ್ದೀಪ್ ಮತ್ತು ಚಕ್ರವರ್ತಿ ನೇತೃತ್ವದ ಭಾರತದ ಸ್ಪಿನ್ನರ್ ಗಳು ನ್ಯೂಝಿಲ್ಯಾಂಡ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದಾರೆ.