ಚಾಂಪಿಯನ್ಸ್ ಟ್ರೋಫಿ | ಭಾರತಕ್ಕೆ 242 ರನ್ ಗಳ ಗುರಿ ನೀಡಿದ ಪಾಕಿಸ್ತಾನ
PC | x.com/airnewsalerts
ದುಬೈ : ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ-ಪಾಕಿಸ್ತಾನದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತಕ್ಕೆ 242 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ಇಮಾಮ್-ಉಲ್-ಹಕ್ 26 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರೆ, ಬಾಬರ್ ಅಜಮ್ 26 ಎಸೆತಗಳಲ್ಲಿ 5 ಬೌಂಡರಿ ನೆರವಿನೊಂದಿಗೆ 23 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ನಾಯಕ ಮುಹಮ್ಮದ್ ರಿಜ್ವಾನ್ 77 ಎಸೆತಗಳಲ್ಲಿ 3 ಬೌಂಡರಿ ನೆರವಿನೊಂದಿಗೆ 46 ರನ್ ಗಳಿಸಿ 33.2 ನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿ ಔಟಾದರೆ, ಸೌದ್ ಶಕೀಲ್ 76 ಎಸೆತಗಳಲ್ಲಿ 5 ಬೌಂಡರಿ ನೆರವಿನೊಂದಿಗೆ 62 ರನ್ ಗಳಿಸಿ 34.5 ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಗೆ ವಿಕೆಟ್ ಒಪ್ಪಿಸಿದರು.
ತಯ್ಯಬ್ ತಾಹಿರ್ 6 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರೆ, ಸಲ್ಮಾನ್ ಆಘಾ 24 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.
ಶಾಹೀನ್ ಅಫ್ರಿದಿ 1ರನ್ ಗಳಿಸಿ ಔಟಾದರೆ, ನಸೀಮ್ ಶಾ 16 ಎಸೆತಗಳಲ್ಲಿ 1 ಬೌಂಡರಿ ನೆರವಿನೊಂದಿಗೆ 14 ರನ್ ಗಳಿಸಿ ಔಟಾದರು. ಹರಿಸ್ ರೌಫ್ 7 ಎಸೆತಗಳಲ್ಲಿ 1 ಸಿಕ್ಸ್ ನೆರವಿನೊಂದಿಗೆ 8 ರನ್ ಗಳಿಸಿ ಔಟಾದರು. ಖುಷ್ದಿಲ್ ಶಾ 39 ಎಸೆತಗಳಲ್ಲಿ 2 ಸಿಕ್ಸ್ ನೆರವಿನೊಂದಿಗೆ 38 ರನ್ ಗಳಿಸಿ ಆಲೌಟಾಯಿತು
ಭಾರತದ ಪರ ಕುಲ್ ದೀಪ್ ಯಾದವ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ ತಲಾ 1 ವಿಕೆಟ್ ಪಡೆದರು.