×
Ad

ಚೀನಾ ಮಾಸ್ಟರ್ಸ್-2024 | ಸಿಂಧು, ಲಕ್ಷ್ಯ, ಮಾಳವಿಕಾ ಶುಭಾರಂಭ

Update: 2024-11-20 21:54 IST

ಪಿ.ವಿ. ಸಿಂಧು | PC : PTI 

ಹೊಸದಿಲ್ಲಿ : ಶೆನ್ಝೆನ್‌ನಲ್ಲಿ ಬುಧವಾರ ನಡೆದ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್- 750 ಪಂದ್ಯಾವಳಿ ಚೀನಾ ಮಾಸ್ಟರ್ಸ್‌ನಲ್ಲಿ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಹಾಗೂ ಮಾಳವಿಕಾ ಬಾನ್ಸೋಡ್ ಎರಡನೇ ಸುತ್ತಿಗೆ ಪ್ರವೇಶೀಸುವ ಮೂಲಕ ಶುಭಾರಂಭ ಮಾಡಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು 50 ನಿಮಿಷಗಳಲ್ಲಿ ಅಂತ್ಯಗೊಂಡಿರುವ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸನನ್ ರನ್ನು 21-17, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.

ಸಿಂಧು ಅವರು ವಿಶ್ವದ ನಂ.11ನೇ ಆಟಗಾರ್ತಿ ಬುಸನನ್ ವಿರುದ್ಧ ಆಡಿರುವ 21 ಪಂದ್ಯಗಳ ಪೈಕಿ 20ನೇ ಗೆಲುವು ದಾಖಲಿಸಿದರು.

ಸಿಂಧು ಮುಂದಿನ ಸುತ್ತಿನಲ್ಲಿ ಸಿಂಗಾಪುರದ ಯೆವೊ ಜಿಯಾ ಮಿನ್‌ರನ್ನು ಎದುರಿಸಲಿದ್ದಾರೆ.

ಒಂದು ಗಂಟೆ ಹಾಗೂ 14 ನಿಮಿಷಗಳ ಕಾಲ ನಡೆದ ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಳವಿಕಾ ಅವರು ಡೆನ್ಮಾರ್ಕ್‌ನ ಲೈನ್ ಕ್ರೆಜೆರ್ಸ್‌ಫೆಲ್ಡ್‌ರನ್ನು 20-22, 23-21, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಮಾಳವಿಕಾ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಸುಪನಿದಾ ಕಟೆಥೊಂಗ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಮಲೇಶ್ಯದ ಲೀ ಝಿ ಜಿಯಾರನ್ನು 21-14, 13-21, 21-13 ಗೇಮ್‌ಗಳ ಅಂತರದಿಂದ ಸೋಲಿಸಿದರು.

ಪ್ಯಾರಿಸ್ ಗೇಮ್ಸ್‌ನ ನಂತರ ಆಡಿರುವ 4 ಪಂದ್ಯಾವಳಿಗಳಲ್ಲಿ ಸೇನ್ ಮೊದಲ ಗೆಲುವು ದಾಖಲಿಸಿದ್ದಾರೆ.

ಲಕ್ಷ್ಯ ಸೇನ್ ಅಂತಿಮ-16ರ ಸುತ್ತಿನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅಥವಾ ಜಪಾನ್‌ನ ಕೆಂಟಾ ನಿಶಿಮೊಟೊರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News