×
Ad

ಚೀನಾ ಓಪನ್ ಟೆನಿಸ್ ಟೂರ್ನಿ : ಸಿನ್ನರ್ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2025-09-25 22:51 IST

Photo Credit: AFP

ಬೀಜಿಂಗ್,ಸೆ.25: ಕ್ರೊಯೇಶಿಯದ ಮರಿನ್ ಸಿಲಿಕ್ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಇಟಲಿಯ ಸ್ಟಾರ್ ಆಟಗಾರ ಜನ್ನಿಕ್ ಸಿನ್ನರ್ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ 2ನೇ ಬಾರಿ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ತನ್ನ ಅಭಿಯಾನ ಆರಂಭಿಸಿದ್ದಾರೆ.

ಸಿನ್ನರ್ ಅವರು ಗುರುವಾರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಒಂದು ಗಂಟೆ, 21 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಚೀನಾ ರಾಜಧಾನಿಯಲ್ಲಿ 2 ಬಾರಿ ಫೈನಲ್‌ಗೆ ತಲುಪಿದ್ದ 36ರ ಹರೆಯದ ಸಿಲಿಕ್ರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಯು.ಎಸ್. ಓಪನ್ ಫೈನಲ್‌ನಲ್ಲಿ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋತ ನಂತರ ಸಿನ್ನರ್ ಆಡಿರುವ ಮೊದಲ ಪಂದ್ಯ ಇದಾಗಿದೆ.

23ರ ಹರೆಯದ ಸಿನ್ನರ್ 2023ರಲ್ಲಿ ಬೀಜಿಂಗ್‌ನಲ್ಲಿ ಬಾರಿ ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದರು. ಆದರೆ ಕಳೆದ ಆವೃತ್ತಿಯ ಟೂರ್ನಿಯಲ್ಲಿ ರನ್ನರ್-ಅಪ್ ಎನಿಸಿಕೊಂಡಿದ್ದರು.

ಸಿನ್ನರ್ ಮುಂದಿನ ಸುತ್ತಿನಲ್ಲಿ ಟೆರೆನ್ಸ್ ಅಟ್ಮನೆ ಅವರನ್ನು ಎದುರಿಸಲಿದ್ದಾರೆ. ಫ್ರಾನ್ಸ್ ಕ್ವಾಲಿಫೈಯರ್ ಅಟ್ಮನೆ ವಿರುದ್ಧ ಒಂದು ತಿಂಗಳೊಳಗೆ 2ನೇ ಬಾರಿ ಆಡುತ್ತಿದ್ದಾರೆ. ಸಿನ್ಸಿನಾಟಿ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಅಟ್ಮನೆ ಅವರು ಸಿನ್ನರ್ ವಿರುದ್ಧ ಸೋತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News