×
Ad

ಕ್ಲಚ್ ಚೆಸ್ ಲೆಜಂಡ್ಸ್: ವಿಶ್ವನಾಥನ್ ಆನಂದ್ ರನ್ನು ಸೋಲಿಸಿದ ಕ್ಯಾಸ್ಪರೊವ್

Update: 2025-10-11 20:32 IST

Image credit: Saint Louis Chess Club/Lennart Ootes

ಸೈಂಟ್ ಲೂಯಿಸ್, ಅ. 11: ಅಮೆರಿಕದ ಸೈಂಟ್ ಲೂಯಿಸ್ನಲ್ಲಿ ನಡೆದ ಕ್ಲಚ್ ಚೆಸ್ ಲೆಜಂಡ್ಸ್ ಸ್ಪರ್ಧೆಯ ಹತ್ತನೇ ಗೇಮ್ನಲ್ಲಿ ಶುಕ್ರವಾರ ರಶ್ಯದ ಗ್ಯಾರಿ ಕ್ಯಾಸ್ಪರೊವ್ ಭಾರತದ ವಿಶ್ವನಾಥನ್ ಆನಂದ್ ರನ್ನು ಸೋಲಿಸಿದರು. ಆ ಮೂಲಕ ಇನ್ನೂ ಎರಡು ಗೇಮ್ ಗಳು ಬಾಕಿಯಿರುವಂತೆಯೇ ಪಂದ್ಯವನ್ನು ಗೆದ್ದರು.

ನಿಯಮಗಳ ಪ್ರಕಾರ, ಬ್ಲಿಝ್ ಟೈಮ್ ಕಂಟ್ರೋಲ್ ಅಡಿ ಆಡಲಾಗುವ ಕೊನೆಯ ಎರಡು ಗೇಮ್ ಗಳನ್ನೂ ಆಡಲಾಯಿತು. ಈ ಎರಡೂ ಪಂದ್ಯಗಳನ್ನು ಸ್ವಲ್ಪ ತಡವಾಗಿಯಾದರೂ ಆನಂದ್ ಗೆದ್ದರು.

ಅಂತಿಮವಾಗಿ ಈ ಸ್ಪರ್ಧೆಯನ್ನು ಕ್ಯಾಸ್ಪರೊವ್ 13-11 ಅಂಕಗಳಿಂದ ಗೆದ್ದರು. ಅವರು 78,000 ಡಾಲರ್ (ಸುಮಾರು 69.20 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಸ್ವೀಕರಿಸಿದರು. ಆನಂದ್ 66,000 ಡಾಲರ್ (ಸುಮಾರು 58.55 ಲಕ್ಷ ರೂಪಾಯಿ) ಪಡೆದರು.

ಮುನ್ನಾದಿನವಾದ ಗುರುವಾರ ಕ್ಯಾಸ್ಪರೊವ್ ಆನಂದ್ರಿಗಿಂತ ಐದು ಅಂಕಗಳಿಂದ ಮುಂದಿದ್ದರು. ಅಂತಿಮ ದಿನವಾದ ಶುಕ್ರವಾರ ಆಡಲು ನಾಲ್ಕು ಗೇಮ್ಗಳಿದ್ದವು. ಪ್ರತಿ ಗೇಮ್ನ ವಿಜಯಕ್ಕೆ ಮೂರು ಅಂಕಗಳು ಲಭಿಸಲಿದ್ದು ಓರ್ವ ಆಟಗಾರ 12 ಅಂಕಗಳನ್ನು ಗೆಲ್ಲಬಹುದಾಗಿತ್ತು. ಹಾಗಾಗಿ, ಆನಂದ್ ಗೆ ಗೆಲ್ಲುವ ಅವಕಾಶಗಳಿದ್ದವು.

ಮೊದಲ ಗೇಮ್ ನಲ್ಲಿ ಆನಂದ್ ಕಷ್ಟಪಟ್ಟು ಡ್ರಾ ಸಾಧಿಸಿದರು. ಎರಡನೇ ಗೇಮ್ ನಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದರೂ, ಅಂತಿಮವಾಗಿ ಆ ಪಂದ್ಯವನ್ನು ಕ್ಯಾಸ್ಪರೊವ್ ಗೆದ್ದರು. ಆ ಮೂಲಕ ಪಂದ್ಯವನ್ನು ಕ್ಯಾಸ್ಪರೊವ್ ಗೆದ್ದರು.

ಕೊನೆಯ ಎರಡು ಬ್ಲಿಝ್ ಗೇಮ್ ಗಳು ಬಾಕಿಯಿದ್ದವು. ಅದನ್ನು ನವೋತ್ಸಾಹದಿಂದ ಆಡಿ ಆನಂದ್ ಗೆದ್ದರು. ಆದರೆ ಒಟ್ಟಾರೆ ಪಂದ್ಯವನ್ನು ಸೋತರು!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News