ಕಾಮನ್ ವೆಲ್ತ್ ಗೇಮ್ಸ್ 2026: ಆತಿಥ್ಯದಿಂದ ಹಿಂದೆ ಸರಿದ ಆಸ್ಟ್ರೇಲಿಯ
ಮೆಲ್ಬೋರ್ನ್ : ಪ್ರಮುಖ ವೆಚ್ಚಗಳನ್ನು ಉಲ್ಲೇಖಿಸಿ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು ಮಂಗಳವಾರ 2026 ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದಿದೆ ಇದರಿಂದಾಗಿ ಸಂಘಟಕರು ಗಲಿಬಿಲಿಗೊಂಡಿದ್ದಾರೆ.
ಸ್ಟೇಟ್ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂಸ್ ಅವರು ಕ್ರೀಡಾಕೂಟವನ್ನು ನಡೆಸಲು ಅಗತ್ಯವಿರುವ ಆರಂಭಿಕ ಅಂದಾಜು Aus$2 ಶತಕೋಟಿ (US$1.36 ಶತಕೋಟಿ) ನಿಂದ ಸುಮಾರು Aus$7 ಬಿಲಿಯನ್ ಆಗಿರಬಹುದು, ಇದು ನಿಜವಾಗಿಯೂ ತುಂಬಾ ದುಬಾರಿ ಎಂದು ಹೇಳಿದ್ದಾರೆ.
"ನಾನು ಸಾಕಷ್ಟು ಕಷ್ಟಕರವಾದ ನಿರ್ದಾರ ಮಾಡಿದ್ದೇನೆ, ಕ್ರೀಡಾಕೂಟಕ್ಕಾಗಿ $ 7 ಬಿಲಿಯನ್ ವೆಚ್ಚ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ" ಎಂದು ಮೆಲ್ಬೋರ್ನ್ನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
"ಕಳೆದ ವರ್ಷಕ್ಕೆ ಅಂದಾಜು ಮಾಡಿದ ಬಜೆಟ್ ನ ಮೂರು ಪಟ್ಟು ವೆಚ್ಚದ ಗೇಮ್ಸ್ ಅನ್ನು ಆಯೋಜಿಸಲು ನಾನು ಆಸ್ಪತ್ರೆಗಳು ಮತ್ತು ಶಾಲೆಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ. 2026 ರಲ್ಲಿ ವಿಕ್ಟೋರಿಯಾದಲ್ಲಿ ಗೇಮ್ಸ್ ಮುಂದುವರೆಯುವುದಿಲ್ಲ. ಒಪ್ಪಂದವನ್ನು ಅಂತ್ಯಗೊಳಿಸುವ ನಮ್ಮ ನಿರ್ಧಾರವನ್ನು ನಾವು ಕಾಮನ್ವೆಲ್ತ್ ಕ್ರೀಡಾಕೂಟದ ಅಧಿಕಾರಿಗಳಿಗೆ ತಿಳಿಸಿದ್ದೇವೆ" ಎಂದು ಅವರು ಹೇಳಿದರು.
20 ಕ್ರೀಡೆಗಳು ಹಾಗೂ 26 ವಿಭಾಗಗಳನ್ನು ಒಳಗೊಂಡಿರುವ ಗೇಮ್ಸ್ ರಾಜ್ಯದ ಐದು ಪ್ರಾದೇಶಿಕ ಕೇಂದ್ರಗಳಾದ ಗೀಲಾಂಗ್, ಬಲ್ಲರಾಟ್, ಬೆಂಡಿಗೊ, ಗಿಪ್ಸ್ ಲ್ಯಾಂಡ್ ಹಾಗೂ ಶೆಪ್ಪರ್ಟನ್ ನಡೆಯಬೇಕಾಗಿದ್ದು, ಇವುಗಳು ತನ್ನದೇ ಆದ ಕ್ರೀಡಾಪಟುಗಳ ಗ್ರಾಮವನ್ನು ಹೊಂದಿವೆ.