×
Ad

ಕೊಪಾ ಅಮೆರಿಕ | ವಿಭಿನ್ನವಾಗಿ ಪ್ರಶಸ್ತಿ ಸ್ವೀಕರಿಸಿದ ಮೆಸ್ಸಿ

Update: 2024-07-15 21:48 IST

PC : PTI 

ಫ್ಲೋರಿಡಾ : ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಜಯಶಾಲಿಯಾದ ನಂತರ ರೋಹಿತ್ ಶರ್ಮಾ ಅವರು ನಿಧಾನವಾಗಿ ನಡೆಯುತ್ತಾ ಟ್ರೋಫಿ ಸ್ವೀಕರಿಸಿದ ವೀಡಿಯೊ ಭಾರೀ ವೈರಲ್ ಆಗಿತ್ತು. ಈ ವಿಶಿಷ್ಟ ನಡಿಗೆಯು ಪುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿಯನ್ನು ನೆನಪಿಸಿತ್ತು. 2022ರಲ್ಲಿ ಖತರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ತನ್ನ ನೇತೃತ್ವದಲ್ಲಿ ಅರ್ಜೆಂಟೀನ ತಂಡ ಚಾಂಪಿಯನ್ ಆದಾಗ ನಿಧಾನ ನಡಿಗೆಯ ಮೂಲಕ ಮೆಸ್ಸಿ ಸಂಭ್ರಮಿಸಿದ್ದು ಭಾರೀ ಸುದ್ದಿಯಾಗಿತ್ತು.

ಅರ್ಜೆಂಟೀನ ತಂಡ ದಾಖಲೆಯ 16ನೇ ಕೊಪಾ ಅಮೆರಿಕ ಪ್ರಶಸ್ತಿ ಜಯಿಸಿದ ನಂತರ ಮೆಸ್ಸಿ ಮತ್ತೊಮ್ಮೆ ನಿಧಾನಗತಿಯ ನಡಿಗೆಯ ಮೂಲಕ ಸಂಭ್ರಮಿಸಿ ಅಭಿಮಾನಿಗಳನ್ನು ರಂಜಿಸಿದರು.

ಟಿ 20 ವಿಶ್ವಕಪ್ ಟ್ರೋಫಿ ಸ್ವೀಕಾರದ ಕ್ಷಣವನ್ನು ಸ್ಮರಣೀಯವಾಗಿಸಿಕೊಳ್ಳಲು ಈ ರೀತಿಯ ವಿಶಿಷ್ಟ ನಡಿಗೆಗೆ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ಸಲಹೆ ನೀಡಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸುವಾಗ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News