×
Ad

ಕ್ರಿಕೆಟ್ ಆಡುವವರಿಗೆ 100 ಯೂರೊ ದಂಡ ವಿಧಿಸಿದ ಇಟಲಿಯ ಬಲಪಂಥೀಯ ಮೇಯರ್!

Update: 2024-09-06 22:22 IST

Photo : freepik

ಮಾನ್ ಫಾಲ್ಕೋನ್ (ಇಟಲಿ) : ಉತ್ತರ ಇಟಲಿಯ ಮಾನ್ ಫಾಲ್ಕೋನ್ ನಗರದಲ್ಲಿ ಕ್ರಿಕೆಟ್ ಅನ್ನು ನಿಷೇಧಿಸಲಾಗಿದೆ. ಈ ನಗರದಲ್ಲಿ ಕ್ರಿಕೆಟ್ ಆಡಿದರೆ 100 ಯೂರೊ ದಂಡ ತೆರಬೇಕಾಗುತ್ತದೆ!

ಮಾನ್ ಫಾಲ್ಕೋನ್ ನಗರದ ಮೇಯರ್ ಕ್ರಿಕೆಟ್ ಆಟಕ್ಕೆ ನಿಷೇಧ ಹೇರಿರುವುದರಿಂದ ಕ್ರಿಕೆಟ್ ಪ್ರಿಯರು ಆ ನಗರದಲ್ಲಿ ಕ್ರಿಕೆಟ್ ಆಡುವುದರಿಂದ ದೂರ ಉಳಿಯುತ್ತಿದ್ದಾರೆ ಎಂದು BBC ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಲಸೆಯ ವಿರುದ್ಧ ಬಲವಾದ ನಿಲುವು ತೆಗೆದುಕೊಂಡಿರುವುದರಿಂದ ಭಾರಿ ಪ್ರಸಿದ್ಧರಾಗಿರುವ ಬಲಪಂಥೀಯ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮೇಯರ್ ಅನ್ನಾ ಮಾರಿಯ ಸಿಸಿಂತ್, ತಮ್ಮ ಸಮುದಾಯವನ್ನು ರಕ್ಷಿಸುವ ಹಾಗೂ ಕ್ರಿಶ್ಚಿಯನ್ ಪರಂಪರೆಯನ್ನು ಎತ್ತಿ ಹಿಡಿಯುವ ಪಣ ತೊಟ್ಟಿದ್ದಾರೆ.

ಕ್ರಿಕೆಟ್ ಮೇಲೆ ವಿಧಿಸಿರುವ ನಿಷೇಧದ ಕುರಿತು ಪ್ರತಿಕ್ರಿಯಿಸಿರುವ ಮೇಯರ್ ಸಿಸಿಂತ್, ಕ್ರಿಕೆಟ್ ಮೈದಾನಕ್ಕೆ ಸ್ಥಳವಿಲ್ಲ ಹಾಗೂ ಹೊಸ ಪಿಚ್ ನಿರ್ಮಿಸಲು ನಿಧಿಯೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಕ್ರಿಕೆಟ್ ಚೆಂಡುಗಳಿಂದ ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ. ಮಾನ್ ಫಾಲ್ಕೋನ್ ನಲ್ಲಿ ಬಾಂಗ್ಲಾದೇಶಿಗರಿಗೆ ಕ್ರಿಕೆಟ್ ಆಡಲು ಅನುಮತಿ ನೀಡುವುದಿಲ್ಲವೆಂದೂ ಅವರು ಹೇಳಿದ್ದಾರೆ.

“ಬಾಂಗ್ಲಾದೇಶಿಗರು ಈ ನಗರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅವರದ್ದು ಶೂನ್ಯ ಕೊಡುಗೆ. ಮಾನ್ ಫಾಲ್ಕೋನ್ ಹೊರಗೆ ಎಲ್ಲಿ ಬೇಕಾದರೂ ಕ್ರಿಕೆಟ್ ಆಡಲು ಅವರ ಸ್ವತಂತ್ರರಾಗಿದ್ದಾರೆ” ಎಂದು ಅವರು ಬಿಬಿಸಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News