×
Ad

ದುಬೈ ಟೆನಿಸ್ ಚಾಂಪಿಯನ್‌ಶಿಪ್ | ಚೊಚ್ಚಲ ಎಟಿಪಿ-500 ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಯೂಕಿ ಭಾಂಬ್ರಿ

Update: 2025-03-02 22:19 IST

ಯೂಕಿ ಭಾಂಬ್ರಿ , ಅಲೆಕ್ಸಿ ಪೊಪಿರಿನ್ | PC : X 

ದುಬೈ: ಭಾರತದ ಟೆನಿಸ್ ತಾರೆ ಯೂಕಿ ಭಾಂಬ್ರಿ ದುಬೈ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯದ ಅಲೆಕ್ಸಿ ಪೊಪಿರಿನ್ ಜೊತೆಗೂಡಿ ತನ್ನ ಮೊದಲ ಎಟಿಪಿ 500 ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಡೋ-ಆಸ್ಟ್ರೇಲಿಯದ ಜೋಡಿ ಫಿನ್‌ಲ್ಯಾಂಡ್‌ನ ಹ್ಯಾರಿ ಹೆಲಿಯೊವಾರಾ ಹಾಗೂ ಬ್ರಿಟನ್‌ನ ಆಟಗಾರ ಹೆನ್ರಿ ಪ್ಯಾಟನ್‌ರನ್ನು 3-6, 7-6, 10-8 ಸೆಟ್‌ಗಳ ಅಂತರದಿಂದ ಮಣಿಸಿದರು.

ಈ ಗೆಲುವಿನ ಮೂಲಕ ಭಾಂಬ್ರಿ ಅವರು ಸೋಮವಾರ ಬಿಡುಗಡೆಯಾಗಲಿರುವ ಎಟಿಪಿ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 40ನೇ ರ್ಯಾಂಕಿಗೆ ತಲುಪಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News