ಎಮರ್ಜಿಂಗ್ ಏಶ್ಯಕಪ್: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಜಯ, ಫೈನಲ್‌ಗೆ ಲಗ್ಗೆ
(Source: Twitter
ಹೊಸದಿಲ್ಲಿ: ಅಂಡರ್-19 ಇಲ್ಲವೇ ಹಿರಿಯ ಮಟ್ಟದಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶವನ್ನು ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾದಾಗಲೆಲ್ಲಾ ಉಭಯ ತಂಡಗಳ ಆಟಗಾರರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗುವುದು ಇದೀಗ ಒಂದು ಟ್ರೆಂಡ್ ಆಗಿಬಿಟ್ಟಿದೆ. ಕೊಲಂಬೊದಲ್ಲಿ ಶುಕ್ರವಾರ ಭಾರತ ಎ ಹಾಗೂ ಬಾಂಗ್ಲಾದೇಶ ಎ ನಡುವೆ ನಡೆದಿದ್ದ ಎಮರ್ಜಿಂಗ್ ಏಶ್ಯಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಇದೇ ರೀತಿಯ ಸನ್ನಿವೇಶ ಕಂಡುಬಂದಿದೆ.
ಭಾರತವು ಸೆಮಿ ಫೈನಲ್ ಪಂದ್ಯವನ್ನು 51 ರನ್‌ನಿಂದ ಗೆದ್ದುಕೊಂಡಿದ್ದರೂ 212 ರನ್ ಚೇಸಿಂಗ್ ವೇಳೆ ಉತ್ತಮ ಆರಂಭ ಪಡೆದಿದ್ದ ಬಾಂಗ್ಲಾದೇಶ ತಂಡ ಭಾರತಕ್ಕೆ ಆತಂಕ ಮೂಡಿಸಿತ್ತು. ಅಂತಿಮವಾಗಿ ಅದು 160 ರನ್‌ಗೆ ಆಲೌಟಾಯಿತು. 26ನೇ ಓವರ್‌ನ ಎರಡನೇ ಎಸೆತದಲ್ಲಿ ಮಾತಿನ ಚಕಮಕಿ ನಡೆಯಿತು. ಯುವರಾಜ್ ಸಿನ್ಹಾ ಬೌಲಿಂಗ್‌ನಲ್ಲಿ ನಿಕಿನ್ ಜೋಸ್ ಪಡೆದ ಡೈವಿಂಗ್ ಕ್ಯಾಚ್‌ನಿಂದಾಗಿ ಸೌಮ್ಯ ಸರ್ಕಾರ್ ವಿಕೆಟ್ ಕಳೆದುಕೊಂಡರು.
ಕ್ಯಾಚ್ ಸರಿಯಾಗಿತ್ತೇ ಇಲ್ಲವೇ ಎಂಬ ಬಗ್ಗೆ ಸರ್ಕಾರ್‌ಗೆ ಗೊಂದಲವಿತ್ತು. ಹೀಗಾಗಿ ಈ ವಿಚಾರವನ್ನು ಖಚಿತಪಡಿಸಿಕೊಳ್ಳಲು ಕ್ರೀಸ್‌ನಲ್ಲಿ ಸ್ವಲ್ಪ ಸಮಯ ನಿಂತರು. ಆಗ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಭಾರತದ ಕೆಲವು ಆಟಗಾರರು ಮೈದಾನದಿಂದ ಹೊರಹೋಗುವಂತೆ ಸರ್ಕಾರ್‌ಗೆ ಸನ್ನೆ ಮಾಡಿದರು. ಪರಿಸ್ಥಿತಿ ಕೈಮೀರುವ ಮೊದಲೇ ಸಾಯಿ ಸುದರ್ಶನ್ ಮಧ್ಯಪ್ರವೇಶಿಸಿ ಎರಡೂ ತಂಡಗಳ ಆಟಗಾರರನ್ನು ಸಮಾಧಾನಪಡಿಸಿದರು. ಬಾಂಗ್ಲಾದೇಶವನ್ನು ಸೆಮಿ ಫೈನಲ್‌ನಲ್ಲಿ ಸೋಲಿಸಿರುವ ಭಾರತ ಎ ತಂಡ ಎಮರ್ಜಿಂಗ್ ಏಶ್ಯಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ.
ಭಾರತವು ನಾಯಕ ಯಶ್ ಧುಲ್ ಸಿಡಿಸಿದ ಅರ್ಧಶತಕದ(66 ರನ್,85 ಎಸೆತ)ನೆರವಿನಿಂದ 211 ರನ್ ಗಳಿಸಿ ಆಲೌಟಾಯಿತು. ಎಡಗೈ ಸ್ಪಿನ್ನರ್ ನಿಶಾಂತ್ ಸಿಂಧು (5-20) ಐದು ವಿಕೆಟ್ ಗೊಂಚಲು ಪಡೆದು ಬಾಂಗ್ಲಾದೇಶವನ್ನು ಕಾಡಿದರು.
India vs Bangladesh - never short of some heat
— FanCode (@FanCode) July 21, 2023
.
.#EmergingAsiaCup2023 #INDAvBANA pic.twitter.com/xxnMx8Arez