×
Ad

ಯೂರೊ ಕಪ್: 16ರ ಘಟ್ಟಕ್ಕೆ ಮುನ್ನಡೆದ ಸ್ಪೇನ್

Update: 2024-07-01 10:09 IST

PC: NDtv 

ಜಾರ್ಜಿಯಾ ವಿರುದ್ಧ 4-1 ಗೋಲುಗಳ ಸುಲಭ ಜಯ ಸಾಧಿಸಿದ ಸ್ಪೇನ್ ತಂಡ ಯೂರೊ-2024 ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಹಂತ ತಲುಪಿದೆ. 16ರ ಘಟ್ಟದಲ್ಲಿ ಸ್ಪೇನ್ ತಂಡ ಜರ್ಮನಿಯ ಸವಾಲು ಎದುರಿಸಲಿದೆ.

ಸ್ವಯಂಕೃತ ಅಪರಾಧದಿಂದ ಆದ ಹಿನ್ನಡೆಯಿಂದ ಚೇತರಿಸಿಕೊಂಡ ಲೂಯಿಸ್ ಡೇ ಲಾ ಫ್ಯುಂಟೆ ನೇತೃತ್ವದ ಸ್ಪೇನ್ ಅಂತಿಮವಾಗಿ ಸುಲಭ ಜಯ ಸಾಧಿಸಿತು. ರಾಬಿನ್ ಲೇ ನೋರ್ಮಡ್ ತಮ್ಮ ಗೋಲು ಪೆಟ್ಟಿಗೆಯೊಳಕ್ಕೇ ಚೆಂಡು ಹೊಡೆದ ಸ್ವಯಂ ಗೋಲಿನ ಪರಿಣಾಮವಾಗಿ ಜಾರ್ಜಿಯಾ ಅಚ್ಚರಿಯ ಮುನ್ನಡೆ ಸಾಧಿಸಿತು.

ಆದರೆ 39ನೇ ನಿಮಿಷದಲ್ಲಿ ರೋಡ್ರಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿದರು. ಅರ್ಧವಿರಾಮದ ಆರು ನಿಮಿಷ ಬಳಿಕ ಫ್ಯಾಬಿಯನ್ ರೂಯಿಝ್ ಗೋಲು ಬಾರಿಸುವ ಮುನ್ನ ನಿಕೋ ವಿಲಿಯಮ್ಸ್ ಹಾಗೂ ದಾನಿ ಓಲ್ಮಾ ಸ್ಪೇನ್ ನ ಮುಂದಿನ ಹಂತವನ್ನು ಖಾತರಿಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News