×
Ad

ಫಿಡೆ ಚೆಸ್‌ ವಿಶ್ವಕಪ್: ಪ್ರಜ್ಞಾನಂದಾ- ಮ್ಯಾಗ್ನಸ್ ಮೊದಲ ಪಂದ್ಯ ಡ್ರಾ

Update: 2023-08-22 20:34 IST

R Praggnanandhaa, Magnus Carlsen | Photo: Twitter \ @IndianTechGuide

ಬಾಕು:  ಭಾರತದ ಆರ್.ಪ್ರಜ್ಞಾನಂದಾ ಮತ್ತು ಮ್ಯಾಗ್ನಸ್ ಕಾರ್ಲ್ಸನ್ ನಡುವಿನ ಚೆಸ್ ವಿಶ್ವಕಪ್ ಫೈನಲ್ನ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಅಝೆರ್ಬೈಜಾನ್ನ ಬೆಕು ನಗರದಲಿ ನಡೆದ ಪ್ರಶಸ್ತಿ ಹೋರಾಟದ ಮೊದಲ ಪಂದ್ಯದಲ್ಲಿ 35 ನಡೆಗಳ ಬಳಿಕ ಡ್ರಾ ನಲ್ಲಿ ಅಂತ್ಯಗೊಳಿಸಲು ಉಭಯ ಆಟಗಾರರು ಸಮ್ಮತಿಸಿದರು.

ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದರು. ತಮ್ಮ ಯೋಜಿತ ಆಟವಾಡಿದ ಭಾರತದ ಕಿರಿಯ ಪ್ರತಿಭೆ ಅದ್ಭುತ ಪ್ರದರ್ಶನ ನೀಡಿದರು. ಹಿಂದಿನ ದಿನವಷ್ಟೇ ಸೆಮಿಫೈನಲ್ನಲ್ಲಿ ಟ್ರೈಬ್ರೇಕರ್ ಕದನ ಗೆಲ್ಲುವಲ್ಲಿ ಆಗಿರುವ ದಣಿವನ್ನೂ ಲೆಕ್ಕಿಸದೇ ಕ್ಷಿಪ್ರ ಹಾಗೂ ಆತ್ಮವಿಶ್ವಾಸದ ನಡೆಗಳೊಂದಿಗೆ ಗಮನ ಸೆಳೆದರು.

ಕಾರ್ಲ್ಸನ್ ತೀರಾ ಆರಾಮದಾಯಕವಾಗಿ ಆಡಿ, ಮೊದಲ ಮೂರು ನಡೆಗೆ ಏಳು ನಿಮಿಷಗಳನ್ನು ತೆಗೆದುಕೊಂಡರು. ಸಾಮಾನ್ಯವಾಗಿ ಮೊದಲ ನಡೆಗಳನ್ನು ವೇಗವಾಗಿ ಪೂರೈಸಿ ಮುಂದಿನ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡುವುದು ಅವರ ಆಟದ ಶೈಲಿ. ಈ ಮೂಲಕ ವ್ಯತ್ಯಯವನ್ನು ಪ್ರದರ್ಶಿಸಿ ಎದುರಾಳಿ ಆಟಗಾರರು ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಆದರೆ ಪ್ರಜಾನಂದ ತಮ್ಮ ಕಪ್ಪು ಬಿಷಪ್ ಕಾಯಿಯನ್ನು ಎ3ಗೆ ಒಯ್ದಾಗ ನಾರ್ವೆ ಆಟಗಾರ ತಮ್ಮ ನಡೆಗಾಗಿ 27 ನಿಮಿಷ 53 ಸೆಕೆಂಡ್ ಗಳನ್ನು ತೆಗೆದುಕೊಂಡರು.

ಬಳಿಕ ಉಭಯ ಆಟಗಾರರು ನಿಖರವಾದ ಆಟ ಪ್ರದರ್ಶಿಸಿ, ಡ್ರಾ ತೀರ್ಮಾನಕ್ಕೆ ಬಂದರು. ಆದರೆ ಎರಡು ದಿನಗಳಿಂದ ಜೀರ್ಣ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಏನೂ ಸೇವಿಸಿಲ್ಲ ಎಂದು ಆಟದ ಬಳಿಕ ಕಾರ್ಲ್ಸನ್ ಹೇಳಿದರು. ಅಂದರೆ ಭಾರತೀಯ ಆಟಗಾರ ವಿಶ್ವದ ನಂಬರ್ 1 ಆಟಗಾರಿಗೆ ಆಘಾತ ನೀಡುವ ಅವಕಾಶವನ್ನು ಕಳೆದುಕೊಂಡಂತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News