×
Ad

ಫಿಫಾ ರ‍್ಯಾಂಕಿಂಗ್ | ಆರು ಸ್ಥಾನ ಕಳೆದುಕೊಂಡ ಭಾರತ ತಂಡ

Update: 2025-07-10 21:22 IST

Credit: X/@IndianFootball

ಲಂಡನ್: ಭಾರತೀಯ ಪುರುಷರ ಫುಟ್ಬಾಲ್ ತಂಡವು ಗುರುವಾರ ಪ್ರಕಟವಾದ ಫಿಫಾ ರ‍್ಯಾಂಕಿಂಗ್‌ ನಲ್ಲಿ ಆರು ಸ್ಥಾನಗಳನ್ನು ಕಳೆದುಕೊಂಡು 133ನೇ ಸ್ಥಾನಕ್ಕೆ ತಲುಪಿದೆ. ಸುಮಾರು 10 ವರ್ಷಗಳ ನಂತರ ಭಾರತವು ಕನಿಷ್ಠ ರ‍್ಯಾಂಕಿಂಗ್‌ ಗೆ ಕುಸಿದಿದೆ.

2016ರ ಡಿಸೆಂಬರ್‌ ನಲ್ಲಿ 135ನೇ ರ‍್ಯಾಂಕಿಗೆ ಕುಸಿದಿತ್ತು.

2023ರ ನಂತರ ಭಾರತದ ಫುಟ್ಬಾಲ್ ತಂಡವು ರ‍್ಯಾಂಕಿಂಗ್‌ ನಲ್ಲಿ ಕುಸಿತ ಕಾಣುತ್ತಾ ಬಂದಿದೆ. 2023ರಲ್ಲಿ ಮೂರು ಟ್ರೋಫಿಗಳನ್ನು ಜಯಿಸುವುದರೊಂದಿಗೆ ಟಾಪ್-100ರೊಳಗೆ ಸ್ಥಾನ ಪಡೆದಿತ್ತು.

2023ರ ಎಎಫ್‌ಸಿ ಏಶ್ಯನ್ ಕಪ್‌ ನಲ್ಲಿ ಗ್ರೂಪ್ ಹಂತದಲ್ಲಿ ನಿರ್ಗಮಿಸಿದ್ದ ಭಾರತ ತಂಡವು 2026ರ ಫಿಫಾ ವಿಶ್ವಕಪ್ ಕ್ವಾಲಿಫೈಯರ್‌ ನಿಂದಲೂ ನಿರ್ಗಮಿಸಿತ್ತು.

ಇಗೊರ್ ಸ್ಟಿಮ್ಯಾಕ್ ಬದಲಿಗೆ ಮನೊಲೊ ಮಾರ್ಕ್ವೆಝ್ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಭಾರತ ತಂಡವು ಕಳೆದ 16 ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯವನ್ನು ಜಯಿಸುವಲ್ಲಿ ವಿಫಲವಾಗಿದೆ.

ಈ ತಿಂಗಳಾರಂಭದಲ್ಲಿ ಮಾರ್ಕ್ವೆಝ್ ಭಾರತ ತಂಡದಿಂದ ಬೇರ್ಪಟ್ಟಿದ್ದು, ಅವರ ಮಾರ್ಗದರ್ಶನದಲ್ಲಿ ಭಾರತ ತಂಡ 2027ರ ಎಎಫ್‌ಸಿ ಏಶ್ಯಕಪ್‌ ನ 3ನೇ ಸುತ್ತಿನ ಪಂದ್ಯದಲ್ಲಿ ಆಡಿರುವ ಕೊನೆಯ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 0-1 ಅಂತರದಿಂದ ಸೋತಿತ್ತು.

ಪ್ರಸಕ್ತ ವಿಶ್ವ ಫುಟ್ಬಾಲ್ ರ‍್ಯಾಂಕಿಂಗ್‌ ನಲ್ಲಿ 6 ಸ್ಥಾನಗಳನ್ನು ಕಳೆದುಕೊಂಡಿರುವ ಭಾರತ ಫುಟ್ಬಾಲ್ ತಂಡವು ಚೈನೀಸ್ ತೈಪೆ, ಕೇಮನ್ ಐಲ್ಯಾಂಡ್ಸ್, ಸೇಂಟ್ ಕಿಟ್ಸ್ ಹಾಗೂ ನೆವಿಸ್, ಅಲ್ ಸಲ್ವಾಡೊರ್ ಹಾಗೂ ಸ್ಲೋವಾಕಿಯಾ ತಂಡವನ್ನು ಸೇರಿಕೊಂಡಿದೆ.

ಕಾಂಗೊ, ಮಾಲ್ಡೀವ್ಸ್, ಹೈಟಿ ಹಾಗೂ ಜಮೈಕಾ ದೇಶಗಳು ಮಾತ್ರ 7 ಸ್ಥಾನಗಳನ್ನು ಕಳೆದುಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News