×
Ad

ಮೊದಲ ಏಕದಿನ: ವೆಸ್ಟ್‌ಇಂಡೀಸ್ 114 ರನ್‌ಗೆ ಆಲೌಟ್

Update: 2023-07-27 21:18 IST

ಬಾರ್ಬಡೋಸ್, ಜು.27:ಅವಳಿ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್(4-6) ಹಾಗೂ ರವೀಂದ್ರ ಜಡೇಜ(3-37)ಸ್ಪಿನ್ ಮೋಡಿಗೆ ತತ್ತರಿಸಿದ ಆತಿಥೇಯ ವೆಸ್ಟ್‌ಇಂಡೀಸ್ ತಂಡ ಭಾರತ ವಿರುದ್ಧದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 23 ಓವರ್‌ಗಳಲ್ಲಿ ಕೇವಲ 114 ರನ್‌ಗೆ ಆಲೌಟಾಗಿದೆ.

ಗುರುವಾರ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ವಿಂಡೀಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು.

ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ವಿಂಡೀಸ್ ಪರ ನಾಯಕ ಶಾಯ್ ಹೋಪ್(43 ರನ್, 45 ಎಸೆತ, 4 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು. ಅಲಿಕ್ ಅಥನಾಝ್(22 ರನ್, 18 ಎಸೆತ) ಹಾಗೂ ಬ್ರೆಂಡನ್ ಕಿಂಗ್(17 ರನ್, 23 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ರೋಮಾರಿಯೊ ಶೆಫರ್ಡ್ ಸಹಿತ ಮೂವರು ಬ್ಯಾಟರ್ ರನ್ ಖಾತೆಯನ್ನೇ ತೆರೆಯಲಿಲ್ಲ.

ಕುಲದೀಪ್ ತನ್ನ 3 ಓವರ್‌ಗಳ ಬೌಲಿಂಗ್‌ನಲ್ಲಿ 2 ಮೇಡನ್ ಸಹಿತ ಕೇವಲ 6 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News