ಭಾರತದ ವಿರುದ್ಧ ಮೊದಲ ಟೆಸ್ಟ್ : ದಕ್ಷಿಣ ಆಫ್ರಿಕಾ 159 ರನ್ ಗೆ ಆಲ್ ಔಟ್
ಜಸ್‌ಪ್ರೀತ್ ಬುಮ್ರಾಗೆ 5 ವಿಕೆಟ್ ಗೊಂಚಲು
Update: 2025-11-14 14:51 IST
PC | X@BCCI
ಕೋಲ್ಕತ್ತ: ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 159 ರನ್ ಗೆ ಆಲ್ ಔಟ್ ಆಗಿದೆ.
ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದ್ದಾರೆ. ಮುಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.