×
Ad

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್: ಅದ್ಭುತ ಕ್ಯಾಚ್ ಪಡೆದು ಗಮನ ಸೆಳೆದ ಸಿರಾಜ್

Update: 2023-07-13 13:01 IST

ಮುಹಮ್ಮದ್ ಸಿರಾಜ್, Photo: twitter@BCCI

ಡೊಮಿನಿಕಾ(ವೆಸ್ಟ್ ಇಂಡೀಸ್) :ಡೊಮಿನಿಕಾದಲ್ಲಿ ಬುಧವಾರ ಆರಂಭವಾದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಕ್ರಿಕೆಟ್ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 33ನೇ ಬಾರಿ ಐದು ವಿಕೆಟುಗಳನ್ನು ಕಬಳಿಸಿ ಮ್ಯಾಜಿಕ್ ಮಾಡಿದರು. ಇನ್ನೋರ್ವ ಸ್ಪಿನ್ನರ್ ರವೀಂದ್ರ ಜಡೇಜ ನಾಲ್ಕು ವಿಕೆಟ್ ಪಡೆದು ಅಶ್ವಿನ್ ಗೆ ಸಾಥ್ ನೀಡಿದರು. ಇದರ ಪರಿಣಾಮ ವೆಸ್ಟ್ ಇಂಡೀಸ್ ನ ಮೊದಲ ಇನಿಂಗ್ಸ್ 150ಕ್ಕೆ ಕೊನೆಗೊಂಡಿತು.

ಅಮೋಘ ಬೌಲಿಂಗ್ ಪ್ರಯತ್ನದ ಹೊರತಾಗಿ, ಭಾರತೀಯರು ಮೈದಾನದಲ್ಲಿಯೂ ಚುರುಕಾಗಿ ಫೀಲ್ಡಿಂಗ್ ಮಾಡಿದ್ದರು. ಹಲವಾರು ಉತ್ತಮ ಕ್ಯಾಚ್ ಪಡೆದಿದ್ದರು. ಈ ಪೈಕಿ ಜರ್ಮೈನ್ ಬ್ಲಾಕ್ ವುಡ್ ರ ಅದ್ಭುತ ಕ್ಯಾಚ್ ಪಡೆದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಎಲ್ಲರ ಗಮನ ಸೆಳೆದರು.

ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಬ್ಲಾಕ್ ವುಡ್ ನೀಡಿದ ಕ್ಯಾಚನ್ನು ಸಿರಾಜ್ ಮಿಡ್ -ಆಫ್ನಿಂದ ಬಲಕ್ಕೆ ಚಲಿಸಿ ಗಾಳಿಯಲ್ಲಿ ಎತ್ತರಕ್ಕೆ ಹಾರಿ ಉತ್ತಮ ಕ್ಯಾಚ್ ಪಡೆದರು. ಕ್ಯಾಚ್ ತೆಗೆದುಕೊಳ್ಳುವ ಭರದಲ್ಲಿ ಅವರ ಮೊಣಕೈಗೆ  ಸ್ವಲ್ಪ ಪೆಟ್ಟು ಕೂಡ ಬಿತ್ತು.ಆಗ ಅವರ ಬಳಿ ತೆರಳಿದ ರವೀಂದ್ರ ಜಡೇಜ ಬೆನ್ನುತಟ್ಟಿ ಹುರಿದುಂಬಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News