×
Ad

ಗೌತಮ್ ಗಂಭೀರ್‌ ರಿಂದ ಹೆಚ್ಚಿನ ಆದ್ಯತೆ ಪಡೆದ ಆರೋಪ: ಮೌನ ಮುರಿದ ಹರ್ಷಿತ್ ರಾಣಾ

Update: 2025-12-02 22:00 IST

ಗೌತಮ್ ಗಂಭೀರ್‌,  ಹರ್ಷಿತ್ ರಾಣಾ | Photo Credit : PTI 

ಹೊಸದಿಲ್ಲಿ, ಡಿ.2: ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿರುವ ಅವಧಿಯಲ್ಲೇ ಭಾರತ ಕ್ರಿಕೆಟ್ ತಂಡದ ಎಲ್ಲ ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ಆಡುವ ಅವಕಾಶ ಪಡೆದಿದ್ದ ಹರ್ಷಿತ್ ರಾಣಾ ತನಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬ ಆರೋಪದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.

ನಾನು ಟೀಕೆಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದೆ ಮೈದಾನದಲ್ಲಿ ತನ್ನ ಕೆಲಸದತ್ತ ಹೆಚ್ಚು ಗಮನ ನೀಡುವೆ ಎಂದು ವೇಗದ ಬೌಲರ್ ರಾಣಾ ಹೇಳಿದ್ದಾರೆ.

ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ತನಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆಂಬ ಆರೋಪಕ್ಕೆ ಗಮನ ನೀಡುವುದಿಲ್ಲ. ಇದು ನನ್ನ ಪ್ರದರ್ಶನದ ಮೇಲೆ ಪರಿಣಾಮಬೀರುವುದಿಲ್ಲ. ನಾನು ನನ್ನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ನೀಡುವೆ ಎಂದು ರಾಣಾ ಹೇಳಿದ್ದಾರೆ.

23ರ ವಯಸ್ಸಿನ ರಾಣಾ ಅವರು ಗಂಭೀರ್ ಕೋಚ್ ಹುದ್ದೆವಹಿಸಿಕೊಂಡ ಬಳಿಕ ಕಳೆದ ವರ್ಷ ಆಸ್ಟ್ರೇಲಿಯ ಪ್ರವಾಸದ ವೇಳೆ ಪರ್ತ್‌ ನಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ತನಕ ಅವರು ದೊಡ್ಡ ಯಶಸ್ಸು ಕಾಣದೇ ಇದ್ದರೂ ಗಂಭೀರ್ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದಾರೆ.

‘‘ನಾನು ಈ ಎಲ್ಲ ಆರೋಪಗಳನ್ನು ಕೇಳುತ್ತಾ ಕೂತರೆ, ಅದನ್ನು ಮನಸ್ಸಿಗೆ ತೆಗೆದುಕೊಂಡರೆ ಮೈದಾನದಲ್ಲಿ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ನಾನು ಇದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಬಯಸುವೆ. ನನ್ನ ಬಗ್ಗೆ ಏನೇ ಹೇಳಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ’’ಎಂದು ಎರಡನೇ ಏಕದಿನ ಪಂದ್ಯಕ್ಕಿಂತ ಮೊದಲು ರಾಣಾ ಹೇಳಿದ್ದಾರೆ.

ರಾಣಾ ಅವರು ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 65 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ್ದರು. ಆ ನಂತರ ತನ್ನ ಹಿಡಿತ ಕಳೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News