×
Ad

ಐಪಿಎಲ್ 2025 | ಟಾಪ್ - 2ನಲ್ಲಿ ಸ್ಥಾನ ಪಡೆಯಲು ಗುಜರಾತ್, ಪಂಜಾಬ್, ಆರ್‌ಸಿಬಿ, ಮುಂಬೈ ನಡುವೆ ಪೈಪೋಟಿ

Update: 2025-05-25 22:35 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಕ್ರಿಕೆಟ್ ಅಭಿಮಾನಿಗಳಿಗೆ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಟೂರ್ನಿಯು ರೋಮಾಂಚನ ಅನುಭವ ನೀಡಿದ್ದು, ಆದರೆ ರೋಚಕ ತಿರುವುಗಳು ಈಗಲೂ ಕಾಣಿಸಿಕೊಳ್ಳುತ್ತಿವೆ.

63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳ ಅಂತರದಿಂದ ಜಯ ಸಾಧಿಸಿ 4ನೇ ಹಾಗೂ ಅಂತಿಮ ಪ್ಲೇ ಆಫ್ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಲೀಗ್ ಹಂತದ 7 ಪಂದ್ಯಗಳು ಬಾಕಿ ಇರುವಾಗ ಅಗ್ರ-4 ಸ್ಥಾನಕ್ಕಾಗಿ ನಡೆದ ಸ್ಪರ್ಧೆಯು ಕೊನೆಗೊಂಡಿದೆ.

ಇದೀಗ ಎಲ್ಲರ ಗಮನ ಲೀಗ್ ಹಂತದ ಕೊನೆಯ ಚರಣದತ್ತ ಹರಿದಿದೆ. ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಲು ನಾಲ್ಕು ಅರ್ಹತಾ ತಂಡಗಳಾದ: ಗುಜರಾತ್ ಟೈಟಾನ್ಸ್(ಜಿಟಿ), ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ), ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಅಗ್ರ ಎರಡು ತಂಡಗಳು ಕ್ವಾಲಿಫೈಯರ್-1ರಲ್ಲಿ ಸ್ಥಾನ ಪಡೆಯಲಿದೆ. ಕ್ವಾಲಿಫೈಯರ್-1ರಲ್ಲಿ ಆಡುವ ತಂಡಗಳಿಗೆ ಗ್ರ್ಯಾಂಡ್ ಫಿನಾಲೆ ತಲುಪಲು ಎರಡು ಅವಕಾಶ ಇರುತ್ತದೆ.

ಅಗ್ರ-3 ತಂಡಗಳಾದ-ಗುಜರಾತ್ ಟೈಟಾನ್ಸ್, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಈಗಾಗಲೇ ನಿರ್ಗಮಿಸಿರುವ ತಂಡಗಳ ಎದುರು ಸೋತಿರುವ ಹಿನ್ನೆಲೆಯಲ್ಲಿ ಅಗ್ರ-2 ಸ್ಥಾನಕ್ಕೇರುವ ವಿಚಾರದಲ್ಲಿ ತಿರುವು ಸಿಕ್ಕಿದೆ.

ಮೇ 27ರಂದು ಮಂಗಳವಾರ ನಡೆಯಲಿರುವ ಕೊನೆಯ ಲೀಗ್ ಪಂದ್ಯದ ನಂತರವಷ್ಟೇ ಅಂಕಪಟ್ಟಿಯ ಅಂತಿಮ ಚಿತ್ರಣ ಲಭಿಸಲಿದೆ.

*ಟಾಪ್-2ರಲ್ಲಿ ಸ್ಥಾನ ಪಡೆಯಲು ಪ್ರತೀ ತಂಡಗಳು ಏನು ಮಾಡುವ ಅಗತ್ಯವಿದೆ ಬಗ್ಗೆ ಮಾಹಿತಿ ಇಲ್ಲಿದೆ.

*ಗುಜರಾತ್ ಟೈಟಾನ್ಸ್(18 ಅಂಕ)

ಈಗಿನ ಸ್ಥಾನ: ಮೊದಲನೇ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ಸೋಲು

ಟಾಪ್-2 ಅರ್ಹತಾ ಸನ್ನಿವೇಶ:

ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯ ಸೋತರೆ ಅಗ್ರ-2ರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

*ಪಂಜಾಬ್ ಕಿಂಗ್ಸ್(17 ಅಂಕ, 1 ಪಂದ್ಯ ಬಾಕಿ)

ಪ್ರಸಕ್ತ ಸ್ಥಾನ: 2

ಉಳಿದಿರುವ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ ಸೋಮವಾರ(ಮೇ 26)

ಟಾಪ್-2 ಅರ್ಹತಾ ಸನ್ನಿವೇಶ

ಗೆಲುವಿನ ಜೊತೆಗೆ ಗುಜರಾತ್ ಅಥವಾ ಆರ್‌ಸಿಬಿ ತನ್ನ ಕೊನೆಯ ಪಂದ್ಯ ಸೋಲಲು ಪ್ರಾರ್ಥಿಸಬೇಕು.

*ರಾಯಲ್ ಚಾಲೆಂಜರ್ಸ್ ಬೆಂಗಳೂರು(17 ಅಂಕ, 1 ಪಂದ್ಯಬಾಕಿ)

ಹಾಲಿ ಸ್ಥಾನ: 3ನೇ

ಉಳಿದಿರುವ ಪಂದ್ಯ: ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ(ಮೇ 27)

ಟಾಪ್-2 ಅರ್ಹತಾ ಸನ್ನಿವೇಶ:

ಗೆಲುವಿನ ಜೊತೆಗೆ ಗುಜರಾತ್ ಅಥವಾ ಪಂಜಾಬ್ ತನ್ನ ಕೊನೆಯ ಪಂದ್ಯ ಸೋಲುವುದನ್ನು ನಿರೀಕ್ಷಿಸಬೇಕು.

*ಮುಂಬೈ ಇಂಡಿಯನ್ಸ್(16 ಅಂಕ, 1 ಪಂದ್ಯ ಬಾಕಿ)

ಹಾಲಿ ಸ್ಥಾನ: 4ನೇ

ಉಳಿದಿರುವ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧ(ಮೇ 26)

*ಟಾಪ್-2 ಅರ್ಹತಾ ಸನ್ನಿವೇಶ

ಗೆಲುವಿನ ಜೊತೆಗೆ ಗುಜರಾತ್ ಅಥವಾ ಆರ್‌ಸಿಬಿ ತನ್ನ ಕೊನೆಯ ಪಂದ್ಯ ಸೋಲುವಂತೆ ಹಾರೈಸಬೇಕು.

ರೋಮಾಂಚಕ ಅಂತ್ಯಕ್ಕೆ ವೇದಿಕೆ ಸಜ್ಜಾಗಿದೆ. ಪ್ರತಿಯೊಂದು ತಂಡದ ಭವಿಷ್ಯ ಸೂಕ್ಷ್ಮವಾಗಿ ಹೆಣೆದುಕೊಂಡಿರುವುದರಿಂದ ಪ್ಲೇ ಆಫ್ ಸುತ್ತು ಆರಂಭವಾಗುವ ಮೊದಲೇ ಅಭಿಮಾನಿಗಳು ನಾಟಕೀಯ ಅಂತಿಮ ವಾರ ನಿರೀಕ್ಷಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News