×
Ad

ಜಿಮ್ಖಾನಾ ಸದಸ್ಯತ್ವ ವಿವಾದ | ‘‘ಸುಳ್ಳು ಆರೋಪಗಳ’’ ಬಗ್ಗೆ ಮೌನ ಮುರಿದ ಜೆಮಿಮಾ ರೊಡ್ರಿಗ್ಸ್

Update: 2025-11-13 22:33 IST

ಜೆಮಿಮಾ ರೊಡ್ರಿಗ್ಸ್ | Photo Credit : NDTV 

ಮುಂಬೈ, ನ. 13: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ ಜೆಮಿಮಾ ರೊಡ್ರಿಗ್ಸ್, ಖಾರ್ ಜಿಮ್ಖಾನಾ ವಿವಾದದ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಕಳೆದ ವರ್ಷ ಅವರ ಜಿಮ್ಖಾನಾ ಕ್ಲಬ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು.

ಜೆಮಿಮಾಗೆ 2023 ಮಾರ್ಚ್‌ನಲ್ಲಿ ಜಿಮ್ಖಾನಾ ಕ್ಲಬ್ ಸದಸ್ಯತ್ವವನ್ನು ನೀಡಲಾಗಿತ್ತು. ಅವರು ಈ ಕ್ಲಬ್‌ನ ಸದಸ್ಯತ್ವ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಆಗಿದ್ದರು.

ಆದರೆ, 2024 ಅಕ್ಟೋಬರ್‌ನಲ್ಲಿ ಜೆಮಿಮಾರ ಆಡುವ ಸದಸ್ಯತ್ವವನ್ನು ಜಿಮ್ಖಾನಾ ಕ್ಲಬ್ ರದ್ದುಗೊಳಿಸಿತು. ಅವರ ತಂದೆಯು ಧಾರ್ಮಿಕ ಚಟುವಟಿಕೆಗಳಿಗಾಗಿ ಸಭಾಂಗಣವೊಂದನ್ನು ಪಡೆಯಲು ಅವರ ಸದಸ್ಯತ್ವವನ್ನು ಉಪಯೋಗಿಸಿಕೊಂಡಿದ್ದರು ಎಂಬುದಾಗಿ ಆರೋಪಿಸಲಾಯಿತು.

ಆದರೆ, ಅಲ್ಲಿ ಏನೂ ತಪ್ಪು ನಡೆದಿಲ್ಲ ಎಂದು ಜೆಮಿಮಾ ಹೇಳಿದ್ದಾರೆ. ‘‘ನಾವು ಯಾವುದೇ ತಪ್ಪು ಮಾಡದಿದ್ದರೂ, ನನ್ನ ಜೊತೆಗೆ ನನ್ನ ಹೆತ್ತವರನ್ನೂ ಅದಕ್ಕೆ ಎಳೆದು ತರಲಾಯಿತು. ಅದರಿಂದ ನೋವಾಗುತ್ತದೆ’’ ಎಂದು ಅವರು ಹೇಳಿದರು.

‘‘ಆ ಸಮಯದಲ್ಲಿ ನಾವು ಏನನ್ನೇ ಮಾಡಿದ್ದರೂ, ನಿಯಮಗಳು ಮತ್ತು ನಿಯಂತ್ರಣಗಳಿಗೆ ಅನುಸಾರವಾಗಿಯೇ ಮಾಡಿದ್ದೆವು. ಅದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಆದರೆ, ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಲಾಯಿತು. ಅದು ನಮ್ಮ ಮೇಲೆ ಗಾಢ ಪರಿಣಾಮ ಬೀರಿದೆ. ಯಾಕೆಂದರೆ ನಾವೇನೂ ತಪ್ಪು ಮಾಡಿಲ್ಲ’’ ಎಂದು ಅವರು ಹೇಳಿದರು.

ಈ ಆರೋಪಗಳನ್ನು ಖಾರ್ ಜಿಮ್ಖಾನಾ ಕ್ಲಬ್ ಅಧ್ಯಕ್ಷ ವಿವೇಕ್ ದೇವನಾನಿ ಕೂಡಾ ನಿರಾಕರಿಸಿದ್ದಾರೆ. ಕ್ಲಬ್‌ನ ಚುನಾವಣೆಗೆ ಮುನ್ನ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News