ಆಡುವ 11ರ ಬಳಗದಲ್ಲಿ ಇಲ್ಲದ ಹರ್ಷಿತ್ ರಾಣಾ ಬೌಲಿಂಗ್ ಮಾಡಿದ್ದು ಹೇಗೆ?
ಹರ್ಷಿತ್ ರಾಣಾ | PC ; X
ಪುಣೆ: ಎರಡು ಟೆಸ್ಟ್ ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಪ್ರತಿಭಾವಂತ ವೇಗಿ ಹರ್ಷಿತ್ ರಾಣಾ, ಪುಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಟಿ20 ಪದಾರ್ಪಣೆ ಮಾಡಿದ್ದಾರೆ. ಆಡುವ 11ರ ಬಳಗದಲ್ಲಿ ಹರ್ಷಿತ್ ರಾಣಾ ಹೆಸರು ಇಲ್ಲದಿದ್ದರೂ, ಅವರು ಶುಕ್ರವಾರದ ಪಂದ್ಯದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾದದ್ದು ಹೇಗೆ ಎಂಬ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ.
ಶುಕ್ರವಾರದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಲ್ರೌಂಡರ್ ಶಿವಂ ದುಬೆ (53) ಭಾರತದ ಇನಿಂಗ್ಸ್ ನ ಕೊನೆಯ ಎಸೆತದಲ್ಲಿ ಗಾಯಗೊಂಡರು. ಜಮೀ ಅವರ ಎಸೆತ ದುಬೆಯವರ ಹೆಲ್ಮೆಟ್ ಗೆ ಬಡಿಯಿತು. ಕಡ್ಡಾಯ ಕನ್ಕ್ಯೂಶನ್ ಪರೀಕ್ಷೆ ಬಳಿಕ ಆಡಲು ದುಬೆ ಅವರಿಗೆ ಅವಕಾಶ ನೀಡಲಾಯಿತು. ಆದರೆ ಆಗ ದುಬೆ ರನೌಟ್ ಆದರು. ದುಬೆ ವೇಗಿ ಹಾಗೂ ಆಲ್ರೌಂಡರ್ ಆಗಿದ್ದು, ರಾಣಾ ಇದುವರೆಗೆ ಭಾರತದಲ್ಲಿ ಆರಂಭಿಕ ವೇಗಿಯ ಪಾತ್ರವನ್ನು ನಿಭಾಯಿಸಿದವರಲ್ಲ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿ ಪಂದ್ಯದಲ್ಲಿ 12ನೇ ಓವರ್ ನಲ್ಲಿ ಬೌಲಿಂಗ್ ಗೆ ಬಂದಿದ್ದರು. ಆದರೆ ಈ ಪಂದ್ಯದಲ್ಲಿ ರಾಣಾ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಕೇವಲ 9 ರನ್ ಗೆ ಔಟ್ ಮಾಡಿದರು. ಪಂದ್ಯದಲ್ಲಿ 3 ವಿಕೆಟ್ ಗಳಿಸಿ ಗಮನ ಸೆಳೆದರು.
ಥರ್ಡ್ಮ್ಯಾನ್ ನಲ್ಲಿ ರವಿ ಬಿಷ್ಣೋಯಿ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಜೋಸ್ ಬಟ್ಲರ್ ಔಟ್ ಆದಾಗ ವೀಕ್ಷಕ ವಿವರಣೆಕಾರರ ಗಮನಕ್ಕೆ ದುಬೆ ಬದಲು ರಾಣಾ ಫೀಲ್ಡಿಂಗ್ ಗೆ ಬಂದಿರುವುದು ತಿಳಿಯಿತು. ಆದರೆ ವಾಸ್ತವವಾಗಿ ರಾಣಾ "ಲೈಕ್ ಟೂ ಲೈಕ್ ಚೇಂಜ್" ಆಟಗಾರನಾಗಿ ದುಬೆ ಬದಲು ಮೈದಾನಕ್ಕೆ ಇಳಿದಿದ್ದರು.
ಆದರೆ ರಾಣಾ ಅವರು ಬೌಲಿಂಗ್ ನಡೆಸಿದ್ದು, ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಭಾರತದ ನಿರ್ಧಾರದಿಂದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಸಮಾಧಾನಗೊಂಡಂತೆ ಇರಲಿಲ್ಲ. ಅವರು ಅಂಪೈರ್ ಗಳ ಜತೆ ಈ ಬಗ್ಗೆ ಚರ್ಚೆಯನ್ನೂ ನಡೆಸಿದರು.
ಐಸಿಸಿ ನಿಯಮಾವಳಿಯ ಪ್ರಕಾರ, ಪಂದ್ಯದ ವೇಳೆ ಗಾಯದ ಕಾರಣದಿಂದ ಯಾವುದೇ ಆಟಗಾರ ಆಡಲು ಸಾಧ್ಯವಾಗದಿದ್ದರೆ ಮಾತ್ರ ಆತನ ಬದಲಿಗೆ ಬೇರೆ ಆಟಗಾರನಿಗೆ "ಲೈಕ್ ಫಾರ್ ಲೈಕ್" ಆಟಗಾರನಾಗಿ ಮೈದಾನಕ್ಕೆ ಇಳಿಯಲು ಅವಕಾಶವಿದೆ. ಶುಕ್ರವಾರ ದುಬೆ ಬದಲು ರಾಣಾ ಅವರನ್ನು ಮೈದಾನಕ್ಕೆ ಇಳಿಸಿರುವುದನ್ನು ಜಾಲತಾಣಗಳಲ್ಲಿ ಹಲವು ಮಂದಿ ವಂಚನೆ ಎಂದು ಬಣ್ಣಿಸಿದ್ದಾರೆ.