ಆಸ್ಟ್ರೇಲಿಯ 236ಕ್ಕೆ ಆಲೌಟ್: ಹರ್ಷಿತ್ ರಾಣಾಗೆ ನಾಲ್ಕು ವಿಕೆಟ್
Photo Credit: X/@bcci
ಸಿಡ್ನಿ: ಇಲ್ಲಿನ ಎಸ್ಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಮೂರನೆ ಏಕದಿನ ಪಂದ್ಯದಲ್ಲಿ ವೇಗಿ ಹರ್ಷಿತ್ ರಾಣಾರ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಬ್ಯಾಟರ್ ಗಳು, 46.4 ಓವರ್ ಗಳಲ್ಲಿ ಕೇವಲ 236 ರನ್ ಗಳಿಗೆ ಆಲೌಟ್ ಆಗಿದ್ದಾರೆ.
ಈಗಾಗಲೇ ಮೂರು ದಿನಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯ 2-0 ಅಂತರದಲ್ಲಿ ತನ್ನ ಕೈವಶ ಮಾಡಿಕೊಂಡಿದ್ದು, ಈ ಪಂದ್ಯ ಔಪಚಾರಿಕವಾಗಿ ಮಾತ್ರ ಉಳಿದಿದೆ. ಭಾರತ ತಂಡ ವೈಟ್ ವಾಶ್ ತಪ್ಪಿಸಿಕೊಳ್ಳಲು ಈ ಪಂದ್ಯದ ಗೆಲುವು ನೆರವಾಗಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡ, ಆರಂಭಿಕ ಬ್ಯಾಟರ್ ಗಳಾದ ಮಿಚೆಲ್ ಮಾರ್ಷ್ (41) ಹಾಗೂ ಟ್ರಾವಿಸ್ ಹೆಡ್ (29) ಜೋಡಿಯ 61 ರನ್ ಗಳ ಜೊತೆಯಾಟದಿಂದ ಉತ್ತಮ ಆರಂಭವನ್ನೇ ಪಡೆಯಿತು. ಬಳಿಕ, ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಪ್ರಸಿದ್ಧ ಕೃಷ್ಣಗೆ ಟ್ರಾವಿಸ್ ಹೆಡ್ ಕ್ಯಾಚಿತ್ತು ನಿರ್ಗಮಿಸಿದ ನಂತರ, ಆಸ್ಟ್ರೇಲಿಯ ತಂಡದ ಪತನ ಪ್ರಾರಂಭಗೊಂಡಿತು.
ಮುಹಮ್ಮದ್ ಸಿರಾಜ್ ರೊಂದಿಗೆ ಬೌಲಿಂಗ್ ಪ್ರಾರಂಭಿಸಿದ ಮಧ್ಯಮ ವೇಗಿ ಹರ್ಷಿತ್ ರಾಣಾ, ನಾಲ್ಕು ಪ್ರಮುಖ ವಿಕೆಟ್ ಗಳನ್ನು ಕಬಳಿಸಿ, ಕಾಂಗರೂಗಳ ಮಗ್ಗಲು ಮುರಿದರು.