×
Ad

ಬಾಂಗ್ಲಾ-ಭಾರತ ಕ್ರಿಕೆಟ್ ಪಂದ್ಯದ ವೇಳೆ ಗ್ವಾಲಿಯರ್ ಬಂದ್ ಗೆ ಕರೆ ನೀಡಿದ ಹಿಂದೂ ಮಹಾಸಭಾ!

Update: 2024-09-24 16:26 IST

PC : PTI 

ಗ್ವಾಲಿಯರ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಲು ಅಕ್ಟೋಬರ್ 6ರಂದು ಗ್ವಾಲಿಯರ್ ನಲ್ಲಿ ನಡೆಯಲಿರುವ ಬಾಂಗ್ಲಾದೇಶ-ಭಾರತ ನಡುವಿನ ಟಿ-20 ಪಂದ್ಯದ ವೇಳೆ ಹಿಂದೂ ಮಹಾಸಭಾ ಗ್ವಾಲಿಯರ್ ಬಂದ್ ಗೆ ಕರೆ ನೀಡಿದೆ.

ಅಕ್ಟೋಬರ್ 6ರಂದು ಗ್ವಾಲಿಯರ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವುದನ್ನು ಹಿಂದೂ ಮಹಾಸಭಾ ವಿರೋಧಿಸುತ್ತಿದೆ ಎಂದು ಸೋಮವಾರ ಸಂಘಟನೆಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಈಗಲೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇಂತಹ ಹೊತ್ತಿನಲ್ಲಿ ಬಾಂಗ್ಲಾದೇಶದೊಂದಿಗೆ ಕ್ರಿಕೆಟ್ ಪಂದ್ಯವಾಡುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಗ್ವಾಲಿಯರ್ ಬಂದ್ ಗೆ ಕರೆ ನೀಡಲಾಗಿದ್ದು, ಬಂದ್ ಅವಧಿಯಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ನಿಷೇಧ ಹೇರಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News