×
Ad

ಒಲೀ ಪೋಪ್‌ಗೆ ಅಡ್ಡ ಬಂದ ಬುಮ್ರಾಗೆ ಐಸಿಸಿಯಿಂದ ಛೀಮಾರಿ

Update: 2024-01-29 23:07 IST

 ಬುಮ್ರಾ, ಒಲೀ ಪೋಪ್ | Photo: PTI 

ಮುಂಬೈ : ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಒಲೀ ಪೋಪ್ ರನ್‌ಗಾಗಿ ಓಡುವಾಗ ಉದ್ದೇಶಪೂರ್ವಕವಾಗಿ ಅಡ್ಡ ಬಂದಿರುವುದಕ್ಕಾಗಿ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾರಿಗೆ ಛೀಮಾರಿ ಹಾಕಲಾಗಿದೆ ಮತ್ತು ಒಂದು ಒಂದು ಡೀಮೆರಿಟ್ ಅಂಕವನ್ನು ನೀಡಲಾಗಿದೆ. ಅವರ ಈ ವರ್ತನೆಯನ್ನು ‘‘ಅನುಚಿತ ದೈಹಿಕ ಸ್ಪರ್ಶ’’ ಎಂಬುದಾಗಿ ಭಾವಿಸಲಾಗಿದೆ.

ಬುಮ್ರಾರ ಅಪರಾಧವು ಐಸಿಸಿ ನೀತಿ ಸಂಹಿತೆಯಲ್ಲಿ ಒಂದನೇ ಹಂತದ ಅಪರಾಧವಾಗಿದೆ. ಛೀಮಾರಿ ಜೊತೆಗೆ, ಬುಮ್ರಾರ ಶಿಸ್ತು ದಾಖಲೆಗೆ ಒಂದು ಡೀಮೆರಿಟ್ ಅಂಕವನ್ನೂ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಬುಮ್ರಾರ ಮೊದಲ ಅಪರಾಧವಾಗಿದೆ.

‘‘ಇಂಗ್ಲೆಂಡ್‌ನ ಎರಡನೇ ಇನಿಂಗ್ಸ್‌ನ 81ನೇ ಓವರ್‌ನಲ್ಲಿ ಘಟನೆ ಸಂಭವಿಸಿದೆ. ಬುಮ್ರಾ ಎಸೆತವೊಂದನ್ನು ಸಂಪೂರ್ಣಗೊಳಿಸಿದ ಬಳಿಕ, ರನ್‌ಗಾಗಿ ಓಡುತ್ತಿದ್ದ ಒಲೀ ಪೋಪ್‌ರ ದಾರಿಗೆ ಉದ್ದೇಶಪೂರ್ವಕವಾಗಿ ಅಡ್ಡ ಬಂದರು. ಇದು ಅನುಚಿತ ದೈಹಿಕ ಸ್ಪರ್ಶಕ್ಕೆ ಕಾರಣವಾಯಿತು’’ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪ್ರಕಟನೆಯೊಂದರಲ್ಲಿ ತಿಳಿಸಿದೆ.ಮುಂಬೈ : ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಒಲೀ ಪೋಪ್ ರನ್‌ಗಾಗಿ ಓಡುವಾಗ ಉದ್ದೇಶಪೂರ್ವಕವಾಗಿ ಅಡ್ಡ ಬಂದಿರುವುದಕ್ಕಾಗಿ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾರಿಗೆ ಛೀಮಾರಿ ಹಾಕಲಾಗಿದೆ ಮತ್ತು ಒಂದು ಒಂದು ಡೀಮೆರಿಟ್ ಅಂಕವನ್ನು ನೀಡಲಾಗಿದೆ. ಅವರ ಈ ವರ್ತನೆಯನ್ನು ‘‘ಅನುಚಿತ ದೈಹಿಕ ಸ್ಪರ್ಶ’’ ಎಂಬುದಾಗಿ ಭಾವಿಸಲಾಗಿದೆ.

ಬುಮ್ರಾರ ಅಪರಾಧವು ಐಸಿಸಿ ನೀತಿ ಸಂಹಿತೆಯಲ್ಲಿ ಒಂದನೇ ಹಂತದ ಅಪರಾಧವಾಗಿದೆ. ಛೀಮಾರಿ ಜೊತೆಗೆ, ಬುಮ್ರಾರ ಶಿಸ್ತು ದಾಖಲೆಗೆ ಒಂದು ಡೀಮೆರಿಟ್ ಅಂಕವನ್ನೂ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಬುಮ್ರಾರ ಮೊದಲ ಅಪರಾಧವಾಗಿದೆ.

‘‘ಇಂಗ್ಲೆಂಡ್‌ನ ಎರಡನೇ ಇನಿಂಗ್ಸ್‌ನ 81ನೇ ಓವರ್‌ನಲ್ಲಿ ಘಟನೆ ಸಂಭವಿಸಿದೆ. ಬುಮ್ರಾ ಎಸೆತವೊಂದನ್ನು ಸಂಪೂರ್ಣಗೊಳಿಸಿದ ಬಳಿಕ, ರನ್‌ಗಾಗಿ ಓಡುತ್ತಿದ್ದ ಒಲೀ ಪೋಪ್‌ರ ದಾರಿಗೆ ಉದ್ದೇಶಪೂರ್ವಕವಾಗಿ ಅಡ್ಡ ಬಂದರು. ಇದು ಅನುಚಿತ ದೈಹಿಕ ಸ್ಪರ್ಶಕ್ಕೆ ಕಾರಣವಾಯಿತು’’ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪ್ರಕಟನೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News