×
Ad

ಐಸಿಸಿ ಅಂಡರ್-19 ವಿಶ್ವಕಪ್: ಜ.20ಕ್ಕೆ ಬಾಂಗ್ಲಾ ವಿರುದ್ಧ ಭಾರತದ ಮೊದಲ ಪಂದ್ಯ

Update: 2023-12-11 23:01 IST

Photo: X

ಹೊಸದಿಲ್ಲಿ: ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ, ಭಾರತವು ತನ್ನ ಅಭಿಯಾನವನ್ನು ಜನವರಿ 20ರಂದು ಬ್ಲೋಮ್‌ಫೋಂಟೇನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ.

ಅಂಡರ್-19 ವಿಶ್ವಕಪ್‌ನ ಪರಿಷ್ಕೃತ ವೇಳಾಪಟ್ಟಿಯನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಸೋಮವಾರ ಪ್ರಕಟಿಸಿದೆ.

ಪಂದ್ಯಾವಳಿಯನ್ನು ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪರಿಷ್ಕರಣೆ ಅಗತ್ಯವಾಗಿತ್ತು. ಕ್ರಿಕೆಟ್ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಅಮಾನತುಗೊಳಿಸಿದ ಬಳಿಕ ಪಂದ್ಯಾವಳಿಯನ್ನು ವರ್ಗಾಯಿಸಲಾಗಿತ್ತು.

ಭಾರತವು ‘ಎ’ ಬಣದಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾದೇಶ, ಐರ್‌ಲ್ಯಾಂಡ್ ಮತ್ತು ಅಮೆರಿಕ ಇದೇ ಬಣದಲ್ಲಿವೆ.

ಜನವರಿ 25ರಂದು ಭಾರತವು ಬ್ಲೋಮ್‌ಫೋಂಟೇನ್‌ನಲ್ಲಿ ಐರ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ. ಬಳಿಕ, ಜನವರಿ 28ರಂದು ಭಾರತವು ಅದೇ ಮೈದಾನದಲ್ಲಿ ತನ್ನ ಕೊನೆಯ ಗುಂಪು ಪಂದ್ಯವನ್ನು ಅಮೆರಿಕದ ವಿರುದ್ಧ ಆಡಲಿದೆ.

ಪಂದ್ಯಾವಳಿಯು ಜನವರಿ 19ರಂದು ಆರಂಭಗೊಳ್ಳಲಿದೆ. ಅಂದು ಎರಡು ಪಂದ್ಯಗಳು ನಡೆಯಲಿವೆ. ಒಂದರಲ್ಲಿ ಐರ್‌ಲ್ಯಾಂಡ್ ಅಮೆರಿಕವನ್ನು ಬ್ಲೋಮ್‌ಫೋಂಟೇನ್‌ನಲ್ಲಿ ಎದುರಿಸಿದರೆ, ಪೋಶೆಟ್ರೂಮ್‌ನಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕ ಮುಖಾಮುಖಿಯಾಗಲಿವೆ.

ಗುಂಪುಗಳು

ಗುಂಪು ಎ: ಭಾರತ, ಐರ್‌ಲ್ಯಾಂಡ್, ಬಾಂಗ್ಲಾದೇಶ, ಅಮೆರಿಕ

ಗುಂಪು ಬಿ: ಇಂಗ್ಲೆಂಡ್, ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್, ಸ್ಕಾಟ್‌ಲ್ಯಾಂಡ್

ಗುಂಪು ಸಿ: ಆಸ್ಟ್ರೇಲಿಯ, ಶ್ರೀಲಂಕಾ, ನಮೀಬಿಯ, ಝಿಂಬಾಬ್ವೆ

ಗುಂಪು ಡಿ: ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಝಿಲ್ಯಾಂಡ್, ನೇಪಾಳ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News