ತ್ರಿಕೋನ ಸರಣಿ | ಭಾರತ ‘ಎ’, ‘ಬಿ’ ಅಂಡರ್- 19 ತಂಡಗಳು ಪ್ರಕಟ
ಹೊಸದಿಲ್ಲಿ, ನ.11: ಮುಂಬರುವ ಅಂಡರ್-19 ತ್ರಿಕೋನ ಸರಣಿಗಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಮಂಗಳವಾರ ಭಾರತ ‘ಎ’ ಹಾಗೂ ಭಾರತ ‘ಬಿ’ ಅಂಡರ್-19 ತಂಡಗಳನ್ನು ಪ್ರಕಟಿಸಿದ್ದು, ಇದರಲ್ಲಿ ಅಫ್ಘಾನಿಸ್ತಾನ ಅಂಡರ್-19 ಮೂರನೇ ತಂಡವಾಗಿದೆ.
ನವೆಂಬರ್ 17ರಂದು ಬೆಂಗಳೂರಿನ ಬಿಸಿಸಿಐ ಸಿಒಇನಲ್ಲಿ ಆರಂಭವಾಗಲಿರುವ ಪಂದ್ಯಾವಳಿಗೆ ಜೂನಿಯರ್ ಆಯ್ಕೆ ಸಮಿತಿಯು ತಂಡಗಳನ್ನು ಆಯ್ಕೆ ಮಾಡಿದೆ.
ಆದರೆ ಯುವ ಬ್ಯಾಟಿಂಗ್ ಪ್ರತಿಭೆ ವೈಭವ ಸೂರ್ಯವಂಶಿ ತ್ರಿಕೋನ ಸರಣಿಯಲ್ಲಿ ಭಾರತದ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿಲ್ಲ.
‘ವೈಭವ್ ಸೂರ್ಯವಂಶಿ ಅವರನ್ನು ಎಸಿಸಿ ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ಗೆ ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ತ್ರಿಕೋನ ಸರಣಿಗೆ ಅವರನ್ನು ಪರಿಗಣಿಸಿಲ್ಲ’ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸೂರ್ಯವಂಶಿ ಈ ತಿಂಗಳಾಂತ್ಯದಲ್ಲಿ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ಗಾಗಿ ಜಿತೇಶ್ ಶರ್ಮಾ ನಾಯಕತ್ವದ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ‘ಎ’ ತಂಡವು ಒಮಾನ್, ಯುಎಇ ಹಾಗೂ ಪಾಕಿಸ್ತಾನ ‘ಎ’ ತಂಡಗಳೊಂದಿಗೆ ‘ಬಿ’ ಗುಂಪಿನಲ್ಲಿದೆ. ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ ‘ಎ’, ಹಾಂಕಾಂಗ್, ಅಫ್ಘಾನಿಸ್ತಾನ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳಿದ್ದು, ಏಶ್ಯ ಕಪ್ ಟೂರ್ನಿಯು ನ.14ರಿಂದ 23ರ ತನಕ ನಡೆಯುವುದು.
ತ್ರಿಕೋನ ಸರಣಿಯು ನ.17ರಂದು ಭಾರತದ ಅಂಡರ್-19 ‘ಎ’ ಹಾಗೂ ಭಾರತದ ಅಂಡರ್-19 ‘ಬಿ’ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ. ತ್ರಿಕೋನ ಸರಣಿಯನ್ನು ಬೆಂಗಳೂರಿನ ಬಿಸಿಸಿಐನ ಸಿಒಇನಲ್ಲಿ ಆಡಲಾಗುತ್ತದೆ.
ಭಾರತದ ಅಂಡರ್-19 ‘ಎ’ ತಂಡಕ್ಕೆ ವಿಹಾನ್ ಮಲ್ಹೋತ್ರಾ ನಾಯಕನಾಗಿದ್ದರೆ, ಅಭಿಜ್ಞಾ ಕುಂಡು ಉಪ ನಾಯಕ ಹಾಗೂ ವಿಕೆಟ್ಕೀಪರ್ ಆಗಿದ್ದಾರೆ.
ಭಾರತದ ಅಂಡರ್-19 ‘ಬಿ’ ತಂಡಕ್ಕೆ ಆರೊನ್ ಜಾರ್ಜ್ ನಾಯಕನಾಗಿದ್ದು, ವೇದಾಂತ ತ್ರಿವೇದಿ ಉಪ ನಾಯಕನಾಗಿದ್ದಾರೆ.
ಭಾರತದ ಅಂಡರ್-19 ‘ಎ’ ತಂಡ: ವಿಹಾನ್ ಮಲ್ಹೋತ್ರಾ(ನಾಯಕ), ಅಭಿಜ್ಞಾ ಕುಂಡು(ಉಪ ನಾಯಕ), ವಫಿ ಕಚ್ಚಿ, ವಂಶ್ ಆಚಾರ್ಯ, ವಿನೀತ್ ವಿ.ಕೆ., ಲಕ್ಷ್ಯ ರೈಚಂದಾನಿ, ಎ.ರಾಪೋಲ್, ಕಾನಿಷ್ಕ್ ಚೌಹಾಣ್, ಖಿಲನ್ ಎ. ಪಟೇಲ್, ಅನ್ಮೋಲ್ಜೀತ್ ಸಿಂಗ್, ಮುಹಮ್ಮದ್ ಎನಾನ್, ಹೆನಿಲ್ ಪಟೇಲ್, ಅಶುತೋಶ್ ಮಹಿದಾ, ಆದಿತ್ಯ ರಾವತ್. ಮುಹಮ್ಮದ್ ಮಲಿಕ್.
ಭಾರತದ ಅಂಡರ್-19 ‘ಬಿ’ ತಂಡ: ಆ್ಯರೊನ್ ಜಾರ್ಜ್(ನಾಯಕ), ವೇದಾಂತ ತ್ರಿವೇದಿ(ಉಪ ನಾಯಕ), ಯುವರಾಜ್ ಗೊಹಿಲ್, ಮೌಲಿಯರಾಜ್ಸಿನ್ಹಾ ಚಾವ್ಡಾ, ರಾಹುಲ್ ಕುಮಾರ್, ಹರ್ವಂಶ್ ಸಿಂಗ್, ಅನ್ವಯ್ ದ್ರಾವಿಡ್, ಆರ್.ಎಸ್. ಅಂಬರೀಶ್, ಬಿ.ಕೆ. ಕಿಶೋರ್, ನಮನ್ ಪುಷ್ಪಕ್, ಹೇಮಚುಡೇಶನ್, ಉದ್ದವ್ ಮೋಹನ್, ಇಶಾನ್ ಸೂಡ್, ದೀಪೇಶ್, ರೋಹಿತ್ ದಾಸ್.