×
Ad

ಅನಧಿಕೃತ ಏಕದಿನ ಪಂದ್ಯದಲ್ಲಿ ಗಾಯಕ್ವಾಡ್ ಶತಕ : ಭಾರತ ʼಎʼ ತಂಡಕ್ಕೆ ಗೆಲುವು

Update: 2025-11-14 07:44 IST

PC | ndtv

ರಾಜ್‍ಕೋಟ್ : ಇಲ್ಲಿನ ಖಂಧೇರಿ ನಿರಂಜನ್ ಶಾ ಸ್ಟೇಡಿಯಂನಲ್ಲಿ ಭಾರತ ʼಎʼ ಮತ್ತು ದಕ್ಷಿಣ ಆಫ್ರಿಕಾ ʼಎʼ ತಂಡಗಳ ನಡುವೆ ಗುರುವಾರ ಆರಂಭವಾದ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ, ಋತುರಾಜ್ ಗಾಯಕ್ವಾಡ್ ಅವರ ಅದ್ಭುತ ಶತಕದ ನೆರವಿನಿಂದ ಭಾರತ ತಂಡ ನಾಲ್ಕು ವಿಕೆಟ್‍ಗಳ ಗೆಲುವು ಸಾಧಿಸಿದೆ.

ಬಲಗೈ ಬ್ಯಾಟ್ಸ್ ಮನ್ 129 ಎಸೆತಗಳಲ್ಲಿ 12 ಬೌಂಡರಿ ಸಹಿತ 117 ರನ್ ಸಿಡಿಸಿ 286 ರನ್‍ಗಳ ಗುರಿ ಬೆನ್ನಟ್ಟುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಮೂರು ಎಸೆತಗಳಿರುವಂತೆಯೇ ಭಾರತ ಗೆಲುವು ಸಾಧಿಸಿತು.

ಇದಕ್ಕೂ ಮುನ್ನ ಡೆಲಾನೊ ಪಾಟ್‍ಗಿಟೇರ್ ಡಿಯಾನ್ ಫೊರೆಸ್ಟಾರ್ ಹಾಗೂ ಬಾರ್ನ್ ಫೋರ್ಟಿಯನ್ ಅವರ ಅರ್ಧಶತಕಗಳ ನೆರವಿನಿಂದ ಪ್ರವಾಸಿತಂಡ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿತು. 53 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿದ್ದಾಗ ಪಾಟ್‍ಗಿಟೇರ್ (90), ಫೊರೆಸ್ಟಾರ್ (77) ಅವರು ಆರನೇ ವಿಕೆಟ್‍ಗೆ 113 ರನ್ ಸೇರಿಸಿ ತಂಡ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು. ಪಾಟ್‍ಗಿಟೇರ್ ಅವರು ಫೋರ್ಟಿಯನ್ (59) ಜತೆ ಸೇರಿ ಏಳನೇ ವಿಕೆಟ್‍ಗೆ ಮತ್ತೆ 87 ರನ್ ದೋಚಿದರು.

ಭಾರತ ʼಎʼ ತಂಡದ ಪರವಾಗಿ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಕಿತ್ತರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News