ಇಂಡಿಯಾ ಓಪನ್: ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಝು ಯಿಂಗ್
Update: 2024-01-21 23:43 IST
Photo Credit: AP
ಹೊಸದಿಲ್ಲಿ: ಚೀನಾದ ಚೆನ್ ಯು ಫಿ ವಿರುದ್ಧ ನೇರ ಗೇಮ್ ಅಂತರದಿಂದ ಜಯ ಗಳಿಸಿ ಪ್ರಾಬಲ್ಯ ಸಾಧಿಸಿರುವ ಚೈನೀಸ್ ತೈಪೆಯ ಆಟಗಾರ್ತಿ ತೈ ಝು ಯಿಂಗ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ವಿಶ್ವದ ಮಾಜಿ ನಂ.1 ಆಟಗಾರ್ತಿ ಯಿಂಗ್ ರವಿವಾರ ಕೆ.ಡಿ. ಜಾಧವ್ ಇಂಡೋರ್ ಸ್ಟೇಡಿಯಮ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಚೀನಾ ಎದುರಾಳಿಯನ್ನು 21-16, 21-12 ಗೇಮ್ಗಳ ಅಂತರದಿಂದ ಸೋಲಿಸಿದರು. ಈ ಜೋಡಿ ಟೋಕಿಯೊ ಒಲಿಂಪಿಕ್ಸ್ ಫೈನಲ್ ನಲ್ಲೂ ಮುಖಾಮುಖಿಯಾಗಿತ್ತು.