×
Ad

ಏಶ್ಯಕಪ್ ಪಂದ್ಯಕ್ಕೂ ಮೊದಲು ಆತ್ಮೀಯ ಕ್ಷಣಗಳನ್ನು ಹಂಚಿಕೊಂಡ ಭಾರತ-ಪಾಕ್ ಕ್ರಿಕೆಟಿಗರು

Update: 2023-09-02 11:03 IST

Photo: © X (Twitter)

ಪಲ್ಲೆಕೆಲೆ: ವಿಶ್ವ ಕ್ರಿಕೆಟ್ ನಲ್ಲಿ ಭಾರತ-ಪಾಕಿಸ್ತಾನದ ಪೈಪೋಟಿಯು ಹೆಸರುವಾಸಿಯಾಗಿದೆ. ಆದರೆ ಮೈದಾನದ ಹೊರಗೆ ಎರಡೂ ತಂಡಗಳ ಆಟಗಾರರು ಸಂಪೂರ್ಣವಾಗಿ ವಿಭಿನ್ನವಾಗಿರುತ್ತಾರೆ ಎನ್ನುವುದಕ್ಕೆ ಕ್ರಿಕೆಟ್ ಪಾಕಿಸ್ತಾನವು ಎಕ್ಸ್ ನಲ್ಲಿ ಬಿಡುಗಡೆ ಮಾಡಿದ ವೀಡಿಯೊ ಸಾಕ್ಷಿಯಾಗಿದೆ.

ಶನಿವಾರದಂದು ನಡೆಯಲಿರುವ ಏಶ್ಯ ಕಪ್ 2023 ಪಂದ್ಯದ ಮೊದಲು ಎರಡೂ ತಂಡಗಳ ಕ್ರಿಕೆಟಿಗರು ಪರಸ್ಪರ ಸಂವಹನ ನಡೆಸುತ್ತಿರುವುದು ಹಾಗೂ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿರುವುದನ್ನು ಕಾಣಬಹುದು.

ವಿರಾಟ್ ಕೊಹ್ಲಿ ಮೈದಾನದಲ್ಲಿ ಹಾರಿಸ್ ರವೂಫ್ ಅವರನ್ನು ಸ್ವಾಗತಿಸಿದರು ಮತ್ತು ಡ್ರೆಸ್ಸಿಂಗ್ ರೂಮ್ ಬಳಿ ಶಾಹೀನ್ ಅಫ್ರಿದಿ ಹಾಗೂ ಶಾದಾಬ್ ಖಾನ್ ಅವರೊಂದಿಗೆ ಸಂವಾದ ನಡೆಸಿದರು. ಇಬ್ಬರು ನಾಯಕರಾದ ರೋಹಿತ್ ಶರ್ಮಾ ಹಾಗೂ ಬಾಬರ್ ಆಝಂ- ಬ್ಯಾಟಿಂಗ್ ನೆಟ್ ಗಳ ಬಳಿ ಪರಸ್ಪರ ಮಾತನಾಡುತ್ತಿರುವುದು ಕಂಡುಬಂದಿದೆ.

ಇದಕ್ಕೂ ಮೊದಲು, ರೋಹಿತ್ ಶರ್ಮಾ ಅವರು ಪಾಕಿಸ್ತಾನ ತಂಡವನ್ನು ಹೊಗಳಿದರು ಹಾಗೂ ಪಂದ್ಯಾವಳಿಯ ಫೈನಲ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆಯೇ ಎಂದು ಕೇಳಿದಾಗ "ಬಹುಶಃ ಈ ಪಂದ್ಯಾವಳಿಯಲ್ಲಿ ಹಾಗೆ ಆಗಬಹುದು’’ ಎಂದು ಆಸಕ್ತಿದಾಯಕ ಉತ್ತರವನ್ನೂ ನೀಡಿದರು.

"ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ನಿಜವಾಗಿಯೂ ಉತ್ತಮವಾಗಿ ಆಡಿದೆ. ಅವರು ನಂ.1 ಆಗಲು ನಿಜವಾಗಿಯೂ ಕಷ್ಟಪಟ್ಟಿದ್ದಾರೆ, ಆ ತಂಡ ನಮಗೆ ಉತ್ತಮ ಸವಾಲಾಗಿದೆ" ಎಂದು ರೋಹಿತ್ ಅವರು ಹೇಳಿದರು.

ಏಶ್ಯಕಪ್ ಗೂ ಮುನ್ನ, ಐಸಿಸಿ ಪುರುಷರ ಏಕದಿನ ತಂಡದ ಶ್ರೇಯಾಂಕದಲ್ಲಿ ಪಾಕಿಸ್ತಾನವು ನಂಬರ್ 1 ಸ್ಥಾನಕ್ಕೆ ಏರಿತು. ಮತ್ತೊಂದೆಡೆ ಭಾರತ ಮೂರನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News