ನಾಲ್ಕನೆ ಟಿ-20 ಪಂದ್ಯ | ಆಸ್ಟ್ರೇಲಿಯಾಗೆ 168 ರನ್ ಗುರಿ ನೀಡಿದ ಭಾರತ
Photo credit:X/BCCI
ಕ್ವೀನ್ಸ್ ಲ್ಯಾಂಡ್: ಇಲ್ಲಿನ ಕೆನರಾ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೆಯ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ.
ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮ (28) ಹಾಗೂ ಶುಭಮನ್ ಗಿಲ್ (46) ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 56 ರನ್ ಗಳ ಉತ್ತಮ ಜೊತೆಯಾಟವಾಡಿತು. ಆದರೆ, ಅಭಿಷೇಕ್ ಶರ್ಮ, ಆ್ಯಡಂ ಝಂಪಾ ಬೌಲಿಂಗ್ ನಲ್ಲಿ ಟಿಮ್ ಡೇವಿಡ್ ಗೆ ಕ್ಯಾಚಿತ್ತು ನಿರ್ಗಮಿಸಿದ ನಂತರ, ಭಾರತ ತಂಡ ಹಠಾತ್ತನೆ ಕುಸಿಯಿತು. ಶುಭಮನ್ ಗಿಲ್ ಹೊರತುಪಡಿಸಿ, ಬೇರೆ ಯಾವ ಆಟಗಾರರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಹೀಗಾಗಿ, ಒಂದು ಹಂತದಲ್ಲಿ 200 ರನ್ ದಾಟುವಂತೆ ಕಂಡು ಬಂದಿದ್ದ ಭಾರತ ತಂಡ, ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಸ್ಟ್ರೇಲಿಯಾ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ನೇಥನ್ ಎಲ್ಲಿಸ್, ನಾಲ್ಕು ಓವರ್ ಗಳಲ್ಲಿ ಕೇವಲ 21 ರನ್ ನೀಡಿ, ಮೂರು ಪ್ರಮುಖ ವಿಕೆಟ್ ಗಳನ್ನು ಕಬಳಿಸಿದರು.