×
Ad

ಮೂರನೇ ಏಕದಿನ ಪಂದ್ಯ | ಇಂಗ್ಲೆಂಡ್ ಗೆ 357 ರನ್ ಗಳ ಗುರಿ ನೀಡಿದ ಭಾರತ

Update: 2025-02-12 17:22 IST

Photo credit: X/BCCI

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಭಾರತ ತಂಡವು 357 ರನ್ ಗಳ ಗುರಿ ನೀಡಿದೆ.

ಟಾಸ್‌ ಸೋತು ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿ ಔಟಾದರು. ಆಗ ಜೊತೆಯಾದ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು.

ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸ್ ನೆರವಿನಿಂದ 56 ರನ್ ಬಾರಿಸಿ 18.6 ಓವರ್ ನಲ್ಲಿ ಆದಿಲ್ ರಶೀದ್ ಬೌಲ್ ಗೆ ಫಿಲ್ ಸಾಲ್ಟ್ ಗೆ ಕ್ಯಾಚ್ ನೀಡಿ ಔಟಾದರು.

ನಂತರ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಅವರು ಶುಭಮನ್ ಗಿಲ್ ಗೆ ನೆರವಾದರು. ಶುಭಮನ್ ಗಿಲ್ 102 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸ್ ನೆರವಿನಿಂದ 112 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 64 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸ್ ನೆರವಿನಿಂದ 78 ರನ್ ಬಾರಿಸಿ ಔಟಾದರು. ಕೆ.ಎಲ್.ರಾಹುಲ್ 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸ್ ನೆರವಿನಿಂದ 40 ರನ್ ಹೊಡೆದು ಔಟಾದರು.

ನಂತರ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್ ಯಾವುದೇ ಉತ್ತಮ ಪ್ರದರ್ಶನ ನೀಡದೇ ಭಾರತ ತಂಡವು ಆಲೌಟ್ ಆಯಿತು.

ಇಂಗ್ಲೆಂಡ್ ಬೌಲರ್ ಗಳಾದ ಆದಿಲ್ ರಶೀದ್ 4, ಮಾರ್ಕ್ ವುಡ್ 2 ವಿಕೆಟ್ ಪಡೆದರೆ, ಜೋ ರೂಟ್, ಸಾಕಿಬ್ ಮಹಮೂದ್, ಗಸ್ ಅಟ್ಕಿನ್ಸನ್ ತಲಾ ಒಂದು ವಿಕೆಟ್ ಪಡೆದರು.

ಮೂರು ಏಕದಿನ ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವು ಈಗಾಗಲೇ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News