×
Ad

ಮೊದಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಕಬಡ್ಡಿ ಲೀಗ್ | ಮೂರು ತಂಡಗಳ ನಾಯಕರ ಜೆರ್ಸಿಗಳ ಅನಾವರಣ

Update: 2024-09-17 21:27 IST

PC : NDTV 

ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಕಬಡ್ಡಿ ಲೀಗ್‌ಗೆ(ಐಪಿಕೆಎಲ್)ಸಂಬಂಧಿಸಿದ ಕುತೂಹಲ ಮುಂದುವರಿದಿದ್ದು ಪ್ರತಿ ತಂಡಗಳು ವಿಭಿನ್ನ ವಿನ್ಯಾಸ ಹಾಗೂ ನಾಯಕತ್ವದ ಗುಣಗಳನ್ನು ಪ್ರಸ್ತುತಪಡಿಸುತ್ತಿವೆ. 2024ರ ಋತುವಿನ ಕಬಡ್ಡಿ ಲೀಗ್‌ಗಾಗಿ ಹರ್ಯಾಣ ಹ್ಯೂರಿಕೇನ್, ರಾಜಸ್ಥಾನ ರೂಲರ್ಸ್ ಹಾಗೂ ಡೆಲ್ಲಿ ಡ್ರಾಗನ್ಸ್ ತನ್ನ ನಾಯಕನ ನೂತನ ಜೆರ್ಸಿಗಳನ್ನು ಅನಾವರಣಗೊಳಿಸುವ ಮೂಲಕ ತಯಾರಿ ಮುಂದುವರೆಸಿವೆ.

ಇಂಡಿಯನ್ ಪ್ರೀಮಿಯರ್ ಕಬಡ್ಡಿ ಲೀಗ್-2024 ಅಕ್ಟೋಬರ್ 4ರಿಂದ ಆರಂಭವಾಗಲಿದೆ.

ಹರ್ಯಾಣ ತಂಡವನ್ನು ಶಿವ ಕುಮಾರ್ , ರಾಜಸ್ಥಾನ ರೂಲರ್ಸ್ ತಂಡವನ್ನು ಕಪಿಲ್ ನರ್ವಾಲ್ ಹಾಗೂ ಡೆಲ್ಲಿ ತಂಡವನ್ನು ವಿಕಾಸ್ ದಹಿಯಾ ನಾಯಕನಾಗಿ ಮುನ್ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News