×
Ad

ಇಂಗ್ಲಿಸ್ ಶತಕ, ಭಾರತಕ್ಕೆ 209 ರನ್ ಗುರಿ ನೀಡಿದ ಆಸೀಸ್

Update: 2023-11-23 20:48 IST

Photo : cricket.com.au

ವಿಶಾಖಪಟ್ಟಣಂ : ಇಲ್ಲಿನ ಡಾ ವೈ ಎಸ್ ರಾಜಶೇಖರ ರೆಡ್ಡಿ ಎಸಿಎ – ವಿಡಿಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ 209 ರನ್ ಗಳ ಗುರಿ ನೀಡಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಗೆ ಬಂದ ಆಸ್ಟ್ರೇಲಿಯ ತಂಡ ತನ್ನ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಸ್ಟೀವ್‌ ಸ್ಮಿತ್‌ - ಮ್ಯಾಟ್‌ ಶಾರ್ಟ್‌ ಜೋಡಿ ಉತ್ತಮ ಆರಂಭ ನೀಡಿತು. 11 ಎಸೆತಗಳಲ್ಲಿ 3 ಬೌಂಡರಿ ಸಹಿತ 13 ರನ್‌ ಗಳಿಸಿದ್ದ ಮ್ಯಾಟ್‌ ಶಾರ್ಟ್‌ ರವಿ ಬಿಷ್ಣೋಯಿ ಎಸೆತದಲ್ಲಿ ಬೌಲ್ಡ್‌ ಆಗುವುದರೊಂದಿಗೆ ಆಸ್ಟ್ರೇಲಿಯ ಮೊದಲ ವಿಕೆಟ್‌ ಪತನವಾಯಿತು. ಆಗ ತಂಡದ ಮೊತ್ತ 31 ರನ್‌, 4.4 ಓವರ್‌ ಚಾಲಿಯಲ್ಲಿತ್ತು. 

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ ಗೆ ಬಂದ ಜೋಸ್‌, ಸ್ಟೀವ್‌ ಸ್ಮಿತ್‌ ಗೆ ಭರ್ಜರಿ ಜೋಡಿಯಾದರು. ತಮ್ಮ ಬ್ಯಾಟ್‌ ಮೂಲಕ ಚೆಂಡನ್ನು ವಿಶಾಖಪಟ್ಟಣದ ಸ್ಟೇಡಿಯಂ ಅಷ್ಟದಿಕ್ಕುಗಳಿಗೂ ತಲುಪಿಸಿದರು. ಭಾರತೀಯ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಅವರ ಪ್ರತೀ ಹೊಡೆತಗಳೂ ಭಾರತೀಯ ಬೌಲರ್‌ಗಳು ಕಣ್ಣು ಬಿಟ್ಟು ನೋಡುವಂತೆ ಮಾಡಿದವು. ಜೋಸ್‌ ಇಂಗ್ಲಿಸ್‌ ಹೊಡೆದ ರಿವರ್ಸ್‌ ಸ್ವೀಪ್‌ ಒಂದನ್ನು ಸೂರ್ಯ ಕುಮಾರ್‌ ಯಾದವ್‌ ಅವರೂ ಸ್ವತಃ ಹುಬ್ಬೇರಿಸಿ ನೋಡಿದರು. ಆಕರ್ಷಕ ಆಟವಾಡಿದ ಇಂಗ್ಲಿಸ್‌ ಸರಣಿಯಲ್ಲಿ ಮೊದಲ ಶತಕ ದಾಖಲಿಸಿದರು.

50 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್‌ ಗಳೊಂದಿಗೆ 110 ರನ್‌ ಗಳಿಸಿದ ಇಂಗ್ಲಿಸ್‌ ಪ್ರಸಿದ್‌ ಕೃಷ್ಣ ಬೌಲಿಂಗ್‌ ನಲ್ಲಿ ಯಶಸ್ವಿ ಜೈಸ್ವಾಲ್‌ಗೆ ಕ್ಯಾಚಿ ನೀಡಿ ವಿಕೆಟ್‌ ಒಪ್ಪಿಸಿದರು. 

ಸ್ಟೀವ್‌ ಸ್ಮಿತ್‌ 52, ಮಾರ್ಕಸ್‌ ಸ್ಟೊಯಿನಿಸ್‌ 7, ಟಿಮ್‌ ಡೇವಿಡ್‌ 19 ರನ್‌ ಗಳಿಸಿದರು. 

ಭಾರತದ ಪರ ರವಿ ಬಿಷ್ದುಣೋಯಿ ದುಬಾರಿ ಬೌಲರ್‌ ಎನಿಸಿದರು. 4 ಓವರ್‌ ಗಳಲಿ 54 ರನ್‌ ನೀಡಿ 1 ವಿಕೆಟ್‌ ಪಡೆದರು. ಪ್ರಸಿದ್ಧ ಕೃಷ್ಣ 50 ರನ್‌ ನೀಡಿ ಒಂದು ವಿಕೆಟ್‌ ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News