×
Ad

ಜಪಾನ್ ಓಪನ್ ಟೆನಿಸ್ ಟೂರ್ನಿ | ಲೈಲಾ ಫೆರ್ನಾಂಡಿಸ್‌ಗೆ ಪ್ರಶಸ್ತಿ

Update: 2025-10-19 21:50 IST

Photo: PTI

ಟೋಕಿಯೊ, ಅ.19: ಜಪಾನ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಝೆಕ್‌ನ ಯುವ ಆಟಗಾರ್ತಿ ಟೆರೆಝಾ ವಲೆಂಟೋವಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಕೆನಡಾದ ಲೈಲಾ ಫೆರ್ನಾಂಡಿಸ್ ಈ ವರ್ಷ 2ನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.27ನೇ ಆಟಗಾರ್ತಿ ಫೆರ್ನಾಂಡಿಸ್ ಅವರು ಟೆರೆಝಾರನ್ನು 6-0, 5-7, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಜುಲೈನಲ್ಲಿ ಒಸಾಕಾದಲ್ಲಿ ನಡೆದಿದ್ದ ಡಿಸಿ ಓಪನ್ ಟೂರ್ನಿಯಲ್ಲೂ ಫೆರ್ನಾಂಡಿಸ್ ಅವರು ಟೆರೆಝಾರನ್ನು ಸೋಲಿಸಿದ್ದರು.

ಒಂದೇ ವರ್ಷ ಎರಡನೇ ಬಾರಿ ಪ್ರಶಸ್ತಿ ಜಯಿಸಿರುವ 23ರ ವಯಸ್ಸಿನ ಫೆರ್ನಾಂಡಿಸ್ ಅವರು ವೃತ್ತಿಬದುಕಿನಲ್ಲಿ ತನ್ನ 5ನೇ ಪ್ರಶಸ್ತಿ ತನ್ನದಾಗಿಸಿಕೊಂಡರು.

ಫೆರ್ನಾಂಡಿಸ್ ಅವರು ವಿಶ್ವದ 78ನೇ ರ್ಯಾಂಕಿನ ಟೆರೆಝಾ ಎದುರು ಮೊದಲ ಸೆಟ್ಟನ್ನು 6-0 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.

ಇದೇ ಮೊದಲ ಬಾರಿ ಡಬ್ಲ್ಯುಟಿಎನಲ್ಲಿ ಫೈನಲ್ ತಲುಪಿದ್ದ 18ರ ಹರೆಯದ ಟೆರೆಝಾ ಅವರು 2ನೇ ಸೆಟ್ಟನ್ನು 7-5 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು. ಫೆರ್ನಾಂಡಿಸ್ 3ನೇ ಸೆಟ್‌ನಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದು, 6-3 ಅಂತರದಿಂದ ಜಯಶಾಲಿಯಾದರು.

ಜಪಾನ್ ಓಪನ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿ, ವಿಶ್ವದ ಮಾಜಿ ನಂ.1 ನವೊಮಿ ಒಸಾಕಾ ಕಾಲುನೋವಿನಿಂದ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿ ಕ್ವಾರ್ಟರ್ ಫೈನಲ್‌ಗಿಂತ ಮೊದಲು ಪಂದ್ಯಾವಳಿಯಿಂದ ಹಿಂದೆ ಸರಿದರು.

ಫೆರ್ನಾಂಡಿಸ್ ಮುಂದಿನ ವಾರ ಟೋಕಿಯೊದಲ್ಲಿ ನಡೆಯಲಿರುವ ಪಾನ್ ಪೆಸಿಫಿಕ್ ಓಪನ್‌ನಲ್ಲಿ ಆಡಲಿದ್ದು, ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ವಿಕ್ಟೋರಿಯ ಎಂಬೊಕೊರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News