ಜಪಾನ್ ಓಪನ್ ಗೆದ್ದ ಜೋಶ್ನಾ ಚಿನ್ನಪ್ಪ
Update: 2025-10-13 21:34 IST
ಜೋಶ್ನಾ ಚಿನ್ನಪ್ಪ | Photo Credit : @KhelNow
ಯೊಕೊಹಾಮ, ಅ. 13: ಯೊಕೊಹಾಮದಲ್ಲಿ ನಡೆದ ಜಪಾನ್ ಓಪನ್ ಸ್ಕ್ವಾಶ್ ಪಂದ್ಯಾವಳಿಯ ಫೈನಲ್‌ನಲ್ಲಿ ಸೋಮವಾರ ಭಾರತೀಯ ಆಟಗಾರ್ತಿ ಜೋಸ್ನಾ ಚಿನ್ನಪ್ಪ ಈಜಿಪ್ಟ್‌ನ ಹಯಾ ಅಲಿಯನ್ನು ನಾಲ್ಕು ಗೇಮ್‌ಗಳಲ್ಲಿ ಸೋಲಿಸಿ ತನ್ನ 11ನೇ ಪಿಎಸ್‌ಎ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಾಜಿ 10ನೇ ವಿಶ್ವ ರ್ಯಾಂಕಿಂಗ್‌ನ ಆಟಗಾರ್ತಿ ಜೋಶ್ನಾ ಮೂರನೇ ಶ್ರೇಯಾಂಕದ ಈಜಿಪ್ಟ್ ಆಟಗಾರ್ತಿಯನ್ನು 38 ನಿಮಿಷಗಳಲ್ಲಿ 11-5, 11-9, 6-11, 11-8 ಗೇಮ್‌ಗಳಿಂದ ಸೋಲಿಸಿದರು.
ಇದಕ್ಕೂ ಮೊದಲು ಸೆಮಿಫೈನಲ್ ನಲ್ಲಿ, ಪ್ರಸಕ್ತ 117ನೇ ವಿಶ್ವ ರ್ಯಾಕಿಂಗ್ ನ ಜೋಶ್ನಾ ಈಜಿಪ್ಟ್‌ನ ನಾಲ್ಕನೇ ಶ್ರೇಯಾಂಕದ ರಾಣಾ ಇಸ್ಮಾಯೀಲ್‌ರನ್ನು 11-7, 11-1, 11-5 ಗೇಮ್‌ಗಳಿಂದ ಹಿಮ್ಮೆಟ್ಟಿಸಿದ್ದರು.