ಜೂನಿಯರ್ ಹಾಕಿ ವಿಶ್ವಕಪ್ | ಬಾಂಗ್ಲಾದೇಶ ವಿರುದ್ಧ ಜಯ, ಕ್ವಾರ್ಟರ್ ಫೈನಲ್ ಗೆ ಫ್ರಾನ್ಸ್
Photo Credit : @asia_hockey
ಚೆನ್ನೈ, ಡಿ.2: ಬಾಂಗ್ಲಾದೇಶ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಜಯ ಸಾಧಿಸಿರುವ ಫ್ರಾನ್ಸ್ ತಂಡವು 2025ರ ಆವೃತ್ತಿಯ ಎಫ್‌ಐಎಚ್ ಹಾಕಿ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.
ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡ ಈ ಸಾಧನೆ ಮಾಡಿದೆ.
‘ಎಫ್’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ದಕ್ಷಿಣ ಕೊರಿಯಾ ತಂಡವನ್ನು 3-1 ಅಂತರದಿಂದ ಮಣಿಸಿತು. ಈ ಗೆಲುವಿನ ಹೊರತಾಗಿಯೂ ಆಸ್ಟ್ರೇಲಿಯನ್ನರು ಕ್ವಾರ್ಟರ್ ಫೈನಲ್ ರೇಸ್‌ನಿಂದ ನಿರ್ಗಮಿಸಿದೆ.
ನಿರಂತರ ಮಳೆಯ ನಡುವೆಯೂ ಚಿಲಿ ತಂಡವು ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಒಮಾನ್ ತಂಡವನ್ನು 2-0 ಅಂತರದಿಂದ ಮಣಿಸಿತು. ಈ ಮೂಲಕ ಮೂರನೇ ಸ್ಥಾನ ಪಡೆಯಿತು.
ಭಾರತ ಹಾಗೂ ಸ್ವಿಟ್ಸರ್‌ಲ್ಯಾಂಡ್ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯ ಮದುರೈನಲ್ಲಿ ನಡೆಯಲಿದೆ. ಜರ್ಮನಿ, ಅರ್ಜೆಂಟೀನ, ಸ್ಪೇನ್, ನೆದರ್‌ಲ್ಯಾಂಡ್ಸ್ ಹಾಗೂ ಫ್ರಾನ್ಸ್ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿವೆ. ನ್ಯೂಝಿಲ್ಯಾಂಡ್ ಕೂಡ ಅಂತಿಮ-8ರಲ್ಲಿ ಸ್ಥಾನ ಪಡೆದಿದೆ.