×
Ad

ತಿಂಗಳ ಅಮಾನತು ಬಳಿಕ ಐಪಿಎಲ್‌ಗೆ ಮರಳಲು ಸಿದ್ಧವಾಗಿರುವ ರಬಾಡ

Update: 2025-05-06 00:09 IST

Photo : AP

ಅಹ್ಮದಾಬಾದ್, ಮೇ 5: ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡುತ್ತಿರುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ, ಉದ್ದೀಪನ ದ್ರವ್ಯ ಸೇವನೆಗಾಗಿ 1 ತಿಂಗಳ ಅಮಾನತು ಅನುಭವಿಸಿದ ಬಳಿಕ ಐಪಿಎಲ್‌ಗೆ ಮರಳಲು ಸಿದ್ಧರಾಗಿದ್ದಾರೆ.

2023 ಜನವರಿಯಲ್ಲಿ ನಡೆದ ಎಸ್‌ಎ20 ಪಂದ್ಯಾವಳಿಯಲ್ಲಿ ಅವರು ಉದ್ದೀಪನ ದ್ರವ್ಯ ಸೇವಿಸಿರುವುದು ಎಪ್ರಿಲ್‌ನಲ್ಲಿ ಪತ್ತೆಯಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರ ವಿರುದ್ಧ 1 ತಿಂಗಳ ನಿಷೇಧವನ್ನು ವಿಧಿಸಲಾಗಿತ್ತು.

ಉದ್ದೀಪನ ದ್ರವ್ಯ ಸೇವನೆಯನ್ನು ಖಚಿತಪಡಿಸುವ ಫಲಿತಾಂಶವನ್ನು ರಬಾಡರಿಗೆ ಎಪ್ರಿಲ್ 1ರಂದು ತಿಳಿಸಲಾಗಿತ್ತು. ಅಂದಿನಿಂದಲೇ ಅವರು ಅಮಾನತಿಗೆ ಒಳಗಾಗಿದ್ದರು. ಹಾಗಾಗಿ, ಅವರು ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದರು.

ಈಗ ಅವರು ಮತ್ತೆ ಆಡುವ ಅರ್ಹತೆ ಪಡೆದಿದ್ದಾರೆ. ಬುಧವಾರ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅವರು ಆಡಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News