×
Ad

2027ರ ವಿಶ್ವಕಪ್‌ ನಲ್ಲಿ ಆಡಲು ಕೊಹ್ಲಿ, ರೋಹಿತ್ ಸಮರ್ಥರಿದ್ದಾರೆ: ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೊರ್ಕೆಲ್

Update: 2025-11-28 21:59 IST

 ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ | Photo Credit : PTI 

ಹೊಸದಿಲ್ಲಿ, ನ.28: ಸ್ಟಾರ್ ಬ್ಯಾಟರ್‌ ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಮರ್ಥರಿದ್ದಾರೆ ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಿಂತ ಮೊದಲು ಮೊರ್ಕೆಲ್ ಈ ಹೇಳಿಕೆ ನೀಡಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಇಬ್ಬರೂ ಲಭ್ಯರಿದ್ದಾರೆ.

ಉನ್ನತ ಮಟ್ಟದಲ್ಲಿ ಇಬ್ಬರು ಹಿರಿಯ ಆಟಗಾರರು ಆಡುವುದನ್ನು ಮುಂದುವರಿಸುವುದಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿರುವ ಮೊರ್ಕೆಲ್, ಪ್ರಮುಖ ಪಂದ್ಯಾವಳಿಯಲ್ಲಿ ಉಭಯ ಆಟಗಾರರ ಅಮೂಲ್ಯ ಅನುಭವ ಯಶಸ್ಸಿಗೆ ಕಾರಣವಾಗಲಿದೆ ಎಂದರು.

‘‘2027ರ ವಿಶ್ವಕಪ್ ಟೂರ್ನಿಗೆ ಇನ್ನು ಸಾಕಷ್ಟು ಸಮಯವಿದೆ. ಕೊಹ್ಲಿ ಹಾಗೂ ರೋಹಿತ್ ಶ್ರೇಷ್ಠ ಆಟಗಾರರು. ಮಾನಸಿಕ ಹಾಗೂ ದೈಹಿಕವಾಗಿ ಫಿಟ್ ಇದ್ದರೆ 2027ರ ವಿಶ್ವಕಪ್‌ ನಲ್ಲಿ ಆಡುವುದು ನಿಶ್ಚಿತ. ನಾನು ಯಾವಾಗಲೂ ಅನುಭವದ ಮೇಲೆ ನಂಬಿಕೆ ಇಡುವೆ. ಈ ಇಬ್ಬರು ಆಟಗಾರರು ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ದು, ಅವರಿಗೆ ಪ್ರಮುಖ ಪಂದ್ಯಾವಳಿಗಳಲ್ಲಿ ಹೇಗೆ ಆಡಬೇಕೆಂದು ಗೊತ್ತಿದೆ’’ ಎಂದು ಆಗಸ್ಟ್‌ ನಲ್ಲಿ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದ ಮೊರ್ಕೆಲ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ರವಿವಾರ ರಾಂಚಿಯಲ್ಲಿ ಆರಂಭವಾಗಲಿದೆ. ಉಳಿದೆರಡು ಪಂದ್ಯಗಳು ಬುಧವಾರ ಹಾಗೂ ಶನಿವಾರದಂದು ರಾಯ್ಪುರ ಹಾಗೂ ವಿಶಾಖಪಟ್ಟಣದಲ್ಲಿ ನಡೆಯಲಿದೆ.

ರೋಹಿತ್ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಹಾಗೂ ಅರ್ಧಶತಕ ಗಳಿಸಿದ್ದರು. ಕೊಹ್ಲಿ ಅವರು ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ನಂತರ ಕೊನೆಯ ಪಂದ್ಯದಲ್ಲಿ ಔಟಾಗದೆ 74 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News